ಬಳ್ಳಾರಿ- ಯಡಿಯೂಪ್ಪರವರು ಈ ಬಾರಿ ಮಂಡಿಸಿರುವ ಬಜೆಟ್ ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಸಾಲ ಮಾಡಿ ಬಜೆಟ್ ಮಂಡನೆ ಮಾಡಿದರೂ  ತುಪ್ಪ ತಿನ್ನಿಲಾಗದ ಸ್ಥಿತಿ ಬಂದಿದೆ ಎಂದು ಕೆಪಿಸಿಸಿ ಮಾದ್ಯಮ ವಕ್ತಾರರಾದ ವೆಂಕಟೇಶ್ ಹೆಗಡೆ ಹೇಳಿದ್ದಾರೆ. ‌ಬಳ್ಳಾರಿಯಲ್ಲಿ ಬಜೆಟ್ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರ ಈ ಬಾರಿ ಇನ್ನಷ್ಟು ಸಾಲ ಮಾಡಿ ಜನರ ಕಲ್ಯಾಣ ಮಾಡುವ ಕನಸು ಕಂಡಿದೆ. ಹಾಗೆ ಕಂಡ ಕನಸೂ ಸಹ ಜನರ ಉದ್ಧಾರಕ್ಕೆ ಅಲ್ಲ, ಬದಲಿಗೆ ಮೂಗಿಗೆ ತುಪ್ಪ ಸವರುವಂತೇ ಇದೆ.

ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆ ಈ ಸಲ ಸಹ ಸುಳ್ಳಾಗಿದೆ. ಯಡಿಯೂರಪ್ಪ ಈ ಬಾರಿ ನಮ್ಮ ಹೂಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇಲ್ಲವೇ ಕಳೆದ ಬಾರಿ ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣ ಮಾಡಲು ಕರಡು ಯೋಜನೆ ರೂಪಿಸಲು ಅನುವುಮಾಡಿಕೊಟ್ಟಿದ್ದು, ಈ ಬಾರಿ ಅದಕ್ಕೆ ಅನುದಾನ ಒದಗಿಸುತ್ತಾರೆಂಬ ನಂಬಿಕೆ ಇತ್ತು. ಆದರೆ, ಈ ಬಾರಿ ಬಜೆಟ್ ನಲ್ಲಿ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜೊತೆ ಮಾತುಕತೆ ಮಾಡುವುದಾಗಿ ಹೇಳುವ ಮೂಲಕ ಈ ಭಾಗದ ಜನರಿಗೆ ಮತ್ತೊಮ್ಮೆ ಮೂಗಿಗೆ ತುಪ್ಪ ಸವರುವ ಕೆಲಸಮಾಡಿದ್ದಾರೆ. ಇನ್ನು ಕಲ್ಯಾಣ ಕರ್ನಾಟಕದ  ಬಗ್ಗೆ ಬಿಜೆಪಿಗರು ಸದಾ ಮಾತನಾಡುವುದರಿಂದ ಈ ಬಾರಿ ಭರಪೂರ ಅನುದಾನ ನೀಡಲಿದ್ದಾರೆಂಬ ಆಶಯ ಇತ್ತು. ಆದರೆ, ಇದೂ ಸಹ ಈ ಬಾರಿ ಸುಳ್ಳಾಗಿದೆ. ಬರೀ 1500 ಕೋಟಿ ರೂ. ಅನುದಾನ ಈ ಭಾಗಕ್ಕೆ ನೀಡಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply