ರಾಮದುರ್ಗ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯಿಸಿ ನಾಳೆ ದಿ. 30-01-2021 ಶನಿವಾರ ಮುಂಜಾನೆ 10 ಗಂಟೆಗೆ ಬಾಣಕಾರ ಪೇಟೆಯ ಶ್ರೀ ಬನಶಂಕರಿ ದೇವಸ್ಥಾನದಿಂದ ನೇಕಾರ ಪೇಟೆಯ ಪ್ರಮುಖ ಬೀದಿಯ ಮುಖಾಂತರ ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು.

ದೇವಾಂಗ ಸಮಾಜದ ಏಳ್ಗೆ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಈ ಹೋರಾಟ ರಾಜ್ಯಾದ್ಯಂತ ನಾಳೆ ನಡೆಸಲು ರಾಜ್ಯ ದೇವಾಗ ಹೋರಾಟ ಸಮಿತಿ ಕರೆ ನೀಡಿದ್ದು, ರಾಮದುರ್ಗ ತಾಲೂಕಿನ ಸಮಸ್ತ ದೇವಾಂಗ ಸಮಾಜದ ಜನರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೆ ಸರ್ವರೂ ಸಹಕರಿಸಬೇಕು ಎಂದು ರಾಮದುರ್ಗ ತಾಲ್ಲೂಕು ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀ ವಿಠ್ಠಲ ಮುರುಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Priya Bot

Leave A Reply