ಪಿ.ಜಿ ವೈದ್ಯ ವಿದ್ಯಾರ್ಥಿಗಳ ಮೂಲಕ ನಿಗಾ..

0

ಹುಬ್ಬಳ್ಳಿ – ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಕೋವಿಡ್ ವ್ಯಾಪಕ ಸ್ವರೂಪ ಪಡೆಯಲಾರಂಭಿಸಿದೆ. ಆದರೆ ಹಳ್ಳಿಗಳಲ್ಲಿ ಸೋಂಕಿಗೆ ಗುರಿಯಾದವರು ಜಿಲ್ಲಾ ಹಾಗೂ ತಾಲೂಕು ಕೋವಿಡ್ ಕೇಂದ್ರಗಳಿಗೆ ಬರಲು ಹಿಂದೇಟು ಹಾಕ್ತಿದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಕಾಳಜಿ ಪ್ರಾರಂಭಿಸಿ, ಪಿ.ಜಿ ವೈದ್ಯ ವಿದ್ಯಾರ್ಥಿಗಳ ಮೂಲಕ ನಿಗಾ ವಹಿಸಲು ನಿರ್ಧರಿಸಿದೆ.

ಹುಬ್ಬಳ್ಳಿಯಲ್ಲಿ  ಗ್ರಾಮೀಣ ಭಾಗದ ಕೋವಿಡ್ ಕಾಳಜಿ ಕೇಂದ್ರಗಳಿಗೆ ಬೆಡ್, ಆಕ್ಸೀಜನ್ ಕಾನ್ಸಂಟ್ರೇಟರ್ ಹಾಗೂ ಆ್ಯಂಬುಲೆನ್ಸ್ ಗಳ ಹಸ್ತಾಂತರ ಮಾಡಲಾಯಿತು. ಹುಬ್ಬಳ್ಳಿಯ ಸರ್ಕೀಟ್ ಹೌಸ್ ನಲ್ಲಿ ಡಿಸಿ ನಿತೇಶ್ ಪಾಟೀಲ ಮತ್ತು ಜಿ.ಪಂ. ಸಿ.ಇ.ಒ ಸುಶೀಲ ಹಸ್ತಾಂತರಿಸಿದರು. ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ಡಿಸಿ ನಿತೇಶ್ ಪಾಟೀಲ, ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ.

ಹೆಚ್ಚುವರಿಯಾಗಿ 20 ಕೋವಿಡ್ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 7000 ಕೇಸ್ ಗಳಿದ್ದು, ಈ ಪೈಕಿ ಶೇ 23 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೆ ಸೇರಿದ್ದಾಗಿವೆ. ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಟೆಸ್ಟ್ ಮಾಡಲಾಗ್ತಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ ಧಾರವಾಡ ಜಿಲ್ಲೆಗೆ 250 ಬೆಡ್ ಕೊಡುಗೆಯಾಗಿ ಬಂದಿವೆ. 10 ಆಕ್ಸೀಜನ್ ಕಾನ್ಸಂಟ್ರೇಟರ್ ಹಾಗೂ ಮೂರು ಆ್ಯಂಬುಲೆನ್ಸ್ ಗಳ ಹೆಚ್ಚುವರಿ ಲಭ್ಯವಾಗಿವೆ. ಆ್ಯಂಬುಲೆನ್ಸ್ ಗಳನ್ನು ಕುಂದಗೋಳ, ಕಲಘಟಗಿ ಹಾಗೂ ನವಲಗುಂದಾ ತಾಲೂಕುಗಳಿಗೆ ತಲಾ ಒಂದು ಹಸ್ತಾಂತರ ಮಾಡಲಾಗ್ತಿದೆ.

ಮೂಲಭೂತ ಸೌಕರ್ಯಕ್ಕೆ 8 ಲಕ್ಷ ರೂಪಾಯಿ ಹಣ ಸಹ ಬಿಡುಗಡೆ ಮಾಡಲಾಗಿದೆ. ಕಿಮ್ಸ್ ಹಾಗೂ ಎಸ್.ಡಿ.ಎಂ. ಪಿಜಿ ವಿದ್ಯಾರ್ಥಿಗಳನ್ನೂ ಚಿಕಿತ್ಸೆಗೆ ಬಳಸಿಕೊಳ್ಳಲಾಗ್ತಿದೆ. ವೈದ್ಯರ ನಡೆ ಹಳ್ಳಿಯ ಕಡೆ ಅನ್ನೊ ಘೋಷ ವಾಕ್ಯದೊಂದಿಗೆ ಪಿಜಿ ವೈದ್ಯ ವಿದ್ಯಾರ್ಥಿಗಳು ಮತ್ತು ಅಪ್ರೆಂಟಿಸ್ ಗಳು ಹಳ್ಳಿಗಳಿಗೆ ನಿಯೋಜನೆ ಮಾಡಲಾಗ್ತಿದೆ. ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಪಿಜಿ ವೈದ್ಯ ವಿದ್ಯಾರ್ಥಿಗಳ ಬಳಕೆ ಮಾಡಿಕೊಳ್ಳಲಾಗ್ತಿದೆ ಎಂದು ನಿತೇಶ್ ಪಾಟೀಲ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 34 ಐಸೋಲೇಷನ್ ಕೇಂದ್ರಗಳನ್ನು  ಆರಂಭಿಸಿರೋದಾಗಿ ಜಿಲ್ಲಾ ಪಂಚಾಯಿತಿ ಸಿ.ಇ.ಒ ಸುಶೀಲ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 144 ಗ್ರಾಮ ಪಂಚಾಯಿತಿಗಳಿದ್ದು, ಹಂತ ಹತವಾಗಿ ಐಸೋಲೇಶನ್ ಕೇಂದ್ರಗಳ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯಲ್ಲಿ 14 ಕೋವಿಡ್ ಕೇರ್ ಸೆಂಟರ್ ಗಳಿವೆ. ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಬೆಡ್ ಗಳು ಖಾಲಿ ಇವೆ.

ಆದ್ರೆ ತಾಲೂಕು ಕೇಂದ್ರಕ್ಕೆ ಬರಲು ಸೋಂಕಿತರ ಹಿಂದೇಟು ಹಾಕ್ತಿದಾರೆ. ಅಂಥವರಿಗೆ ಹಳ್ಳಿಯಲ್ಲಿಯೇ ಐಸೋಲೇಷನ್ ಗೆ ವ್ಯವಸ್ಥೆ ಮಾಡಲಾಗ್ತಿದೆ. ಅಲ್ಲಿಯೇ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುವುದು. ಇದುವರೆಗೆ ಯಾವುದೇ ಕೊರೋನಾ ಮುಕ್ತ ಗ್ರಾಮವೆಂದು ಡಿಕ್ಲೇರ್ ಮಾಡಿಲ್ಲ ಎಂದು ಸುಶೀಲ ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Bot

Leave A Reply