ಜನತಾ ಕರ್ಫ್ಯೂ ನಿಯಮ ಉಲ್ಲಂಘಿಸಿ ವ್ಯಾಪಾರ.

0

ರಾಯಚೂರು – ರಾಯಚೂರಿನ ವಾರದ ಎರಡು ದಿನಗಳ‌ ಜನತಾ ಕರ್ಪ್ಯೂ ನಡುವೆ ಕೆಲವರು ವ್ಯಾಪಾರ-ವಹಿವಾಟು ನಡೆಸುತ್ತಿರುವ ಕಂಡು ಬಂದಿದೆ. ಕೊರೊನಾ ಸೋಂಕಿನ ತಡೆಗೆ ಜಿಲ್ಲೆಯಲ್ಲಿ ಶನಿವಾರ-ಭಾನುವಾರ ಎರಡು ದಿನಗಳ ಕಾಲ ತುರ್ತು ಸೇವೆಗಳು ಹೊರತುಪಡಿಸಿ ಉಳಿದ ಎಲ್ಲಾ ಸಾರ್ವಜನಿಕ ಸೇವೆಗಳು ನಿರ್ಭದ ವಿಧಿಸಲಾಗಿದೆ. ಇದರ ನಡುವೆ ಇಂದು ಬೆಳಿಗ್ಗೆ ಕಿರಾಣಿ ಅಂಗಡಿ, ತರಕಾರಿ, ಡ್ರೈಪ್ರೋರ್ಟ್ಸ, ಹಣ್ಣಿನ ವ್ಯಾಪಾರಸ್ಥರು ವ್ಯಾಪಾರದಲ್ಲಿ ತೊಡುವ ಮೂಲಕ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂತು.

ಇನ್ನು ರಾಯಚೂರು ಜಿಲ್ಲೆಯ ಕೊರೊನಾ ಸೋಂಕಿನ ಪ್ರಮಾಣ ಹಂತ ಹಂತವಾಗಿ ಇಳಿಮುಖವಾದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಡಲಿಕೆ ಮಾಡಿ, ಸೋಮವಾರದಿಂದ ಶುಕ್ರವಾರ ವರೆಗೆ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಜೀವನೋಪಾಯದ ವಸ್ತುಗಳು, ಮಾಂಸ, ಮದ್ಯದ ಅಂಗಡಿಗಳು, ಕೃಷಿ ಚಟುಚಟಿಕೆಯ ವಸ್ತುಗಳ ಅಂಗಡಿಗಳು ಹಾಗೂ ಸಿಮೇಂಟ್, ಸ್ಟೀಲ್ ಶಾಪ್ ತೆರಯಲು ಅನುವು ಮಾಡಿ ಉಳಿದ ಎಲ್ಲಾ ಸೇವೆಗಳನ್ನ ಮಾಡದಂತೆ ಆದೇಶಿಸಿದೆ. ಶನಿವಾರ-ಭಾನುವಾರ ಜನತಾ ಕರ್ಪ್ಯೂ ಜಾರಿ ಮಾಡಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply