ಗದಗ- ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಮುಷ್ಕರ ಸದ್ಯಕ್ಕೆ ಮುಗಿಯುವ ಲಕ್ಷಣಗಳನ್ನು ಕಾಣುತ್ತಿಲ್ಲಾ.‌ ಗದಗನಲ್ಲಿ ಸಾರಿಗೆ ಸಿಬ್ಬಂದಿಯೋರ್ವ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡ ರಾತ್ರಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರರನ್ನು ವಸಂತ ರಾಮದುರ್ಗ ಎಂದು ತಿಳಿದಿಬಂದಿದೆ. ವಸಂತ್ ರಾಮದುರ್ಗ್ ಗದಗ ಜಿಲ್ಲೆ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿದ್ದು, ಆದ್ರೆ ಆತ್ಮಹತ್ಯೆಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ,

ಆದ್ರೆ ಡ್ಯೂಟಿಗೆ ಹಾಜರಾಗಿ ಎಂದಿದ್ದಕ್ಕೆ ಮನನೊಂದು ವಿಷ ಸೇರಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇನ್ನೂ ಅಧಿಕಾರಿಗಳ ಕಿರುಕುಳಕ್ಕೆ ವಿಷ ಸೇವಿಸಿರುವುದಾಗಿ ಕುಟುಂಬಸ್ಥರ ಆರೋಪ ಮಾಡಿದ್ದಾರೆ. ಗದಗ ತಾಲೂಕಿನ ಕದಡಿ ಗ್ರಾಮದ ಸಿಬ್ಬಂದಿಯಾಗಿದ್ದು ಕುಟುಂಬಸ್ತರು ಸಾರಿಗೆ ಹಿರಿಯ ಅಧಿಕಾರಿಗಳು ಮೇಲೆ ಆರೋಪ ಮಾಡಿದ್ದಾರೆ. ಇನ್ನು ಆತ್ಮಹತ್ಯೆಗೆ ಯತ್ನಿಸಿದ ವಸಂತ್ ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply