ಬೆಂಗಳೂರು  – ಬೆಂಗಳೂರು ವಿವಿಧ ಬೇಡಿಕೆ ಆಗ್ರಹಿಸಿ ಸಾರಿಗೆ ನೌಕರರು ಕರೆನೀಡಿರುವ ಮುಷ್ಕರಕ್ಕೆ ಸರ್ಕಾರ ಬೆಚ್ಚಿ ಬಿದ್ದಿದೆ. ನಾಳೆಯಿಂದ ಬಸ್‌ ನೌಕರರ ಮುಷ್ಕರ ಹಿನ್ನೆಲೆ ಸಿ ಎಮ್ ಯಡಿಯೂರಪ್ಪ ಅವರು ತುರ್ತು ಸಭೆ ನಡೆಸಿದ್ದಾರೆ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ಎಮ್ ಡಿ ಗಳ ಜೊತೆಯಲ್ಲಿ ಸಭೆ ನಡೆಸಿದ ಅವರು , ಒಂದು ವೇಳೆ ಸಾರಿಗೆ ನೌಕರರು ಮುಷ್ಕರ ಮಾಡಿದ್ದೇ ಆದಲ್ಲಿ ಪರ್ಯಾಯ ಯಾವೆಲ್ಲಾ ಕ್ರಮಗಳನ್ನು ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ. ತುರ್ತು ಸಭೆ ನಡೆಸಿದ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಒಂದು ವೇಳೆ ಪರ್ಯಾಯವಾಗಿ ಸಾರಿಗೆ ಬಸ್ ಗಳ ಬದಲಿಗೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳ ಬಹುದು ಎಂದು ಚರ್ಚೆ ನಡೆಸಲಾಗಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply