ಲೇಖನ ಡಾ. ಈಶ್ವರಾನಂದ ಸ್ವಾಮೀಜಿ

ಒಮ್ಮೆ ಒಬ್ಬ ಯುವಕ ಈಗೋ ನಾಳೆಯೋ ಹೂವಾಗಿ ಅರಳುವ ಕುಂಡ ಸಹಿತ ಮೊಗ್ಗನ್ನು ತನ್ನ ಕೊಣೆಯಲ್ಲಿಟ್ಟು ಹೇ ! ಮೊಗ್ಗೆ ಅರಳು, ಅರಳು ಎಂದು ಧ್ಯಾನಿಸತೊಡಗಿದನು. ಒಂದು ದಿನವಲ್ಲ, ಮೂರು ವರ್ಷ ಧ್ಯಾನಿಸಿದ. ಮೊಗ್ಗು ಹೂವಾಗಿ ಅರಳಲಿಲ್ಲ. ಬೇಸತ್ತು ಕೊಣೆಯಿಂದ ಒಂದು ಕ್ಷಣ ಹೊರಬಂದು ಒಳಹೋದಗ ತನ್ನ ಕಣ್ಣುಗಳು ನಂಬಲಾರದಷ್ಟು ಆಶ್ಚರ್ಯ ಕಾದಿತ್ತು. ಮೂರು ವರ್ಷದಿಂದ ಹೂವಾಗಿ ಅರಳದ ಮೊಗ್ಗು ಕ್ಷಣಾರ್ಧದಲ್ಲಿ ಹೂವಾಗಿ ಅರಳಿತ್ತು. ಕೋಪದಿಂದ ಯುವಕ ಕೇಳಿದ. ಒಂದು ದಿನವಲ್ಲ, ಮೂರು ವರ್ಷ ನಿನ್ನ ಹತ್ತಿರ ಕುಳಿತು ನೀರು ಆಹಾವಿಲ್ಲದೆ ಧ್ಯಾನಿಸಿದೆ. ಆಗ ಹೂವಾಗಿ ಅರಳದ ನೀನು ಈಗೇಕೆ ಹೂವಾಗಿ ಅರಳಿದೆ ? ಆಗ ಹೂವು ನಾನು ಅರಳಲು ನಿನ್ನ ಉಪವಾಸ ಬೇಕಾಗಿಲ್ಲ. ನನಗೆ ಬೇಕಾದದ್ದು ಸೂರ್ಯನ ಕಿರಣ ಸ್ಪರ್ಶ. ಈಗ ನೀನು ಬಾಗಿಲು, ಕಿಟಕಿ ತಗೆದಾಗ ಕಿರಣ ಸ್ಪರ್ಶದಿಂದ ಹೂವಾಗಿ ಅರಳಿದೆ ಎಂದಿತು.
ಹಾಗೆಯೇ ಮಾನವನು ಕಿಟಕಿ ಬಾಗಿಲುಗಳೆಂಬ ಮನಸ್ಸು ದೇಹೇಂದ್ರಿಯಗಳನ್ನು ಗುರು-ದೇವತೆ ಮುಂದೆ ಇಟ್ಟಾಗ ಮಾತ್ರ ಅವರ ಆಶೀರ್ವಾದ ಎನ್ನುವ ಕಿರಣ ಹೃದಯ ಸ್ಪರ್ಶಿಸಿ ಹೂವಾಗಿ ಅರಳುತ್ತದೆ.

ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದಡೆ
ಆ ತೃಣವನಾ ಕೆಂಡ ನುಂಗಿದಂತೆ
ಗುರು ಚರಣದ ಮೇಲೆ ತನುವೆಂಬ ತೃಣವನಿರಿಸಿದಡೆ
ಆತನ ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ.

ದೇವರ ದಾಸಿಮಯ್ಯನವರು ಇದನ್ನು ವಚನದಲ್ಲಿ ಬಹು ಸುಂದರವಾಗಿ ದೃಷ್ಟಾಂತದ ಮೂಲಕ ತಿಳಿಸಿದ್ದರೆ. ಉರಿಯುವ ಅಗ್ನಿಯ ಮೇಲೆ ತೃಣವನ್ನಟ್ಟರೆ, ಆ ಅಗ್ನಿಯು ಆ ತೃಣವನ್ನು ಸುಟ್ಟು ತನ್ನಂತೆ ಮಾಡಿಕೊಳ್ಳುವಂತೆ, ಗುರು-ದೇವತೆಗಳ ಚರಣವೆಂಬ ಅಗ್ನಿಗೆ ಇಂದ್ರಿಯಗಳನ್ನು ಅರ್ಪಿಸಿದರೆ, ಮಾನವನ ಇಡೀ ಶರೀರವೇ ಲಿಂಗವಾಗಿ ಪರಿಣಮಿಸುತ್ತದೆ. ಆ ಲಿಂಗವು ಅಥವಾ ಅರಳಿರುವ ಹೂವು ಯಾರಿಗೆ ತಾನೆ ಬೇಡ ? ಎಲ್ಲರು ಇಷ್ಟಪಡುವರು. ಆದ್ದರಿಂದ ಹೃದಯ, ಮನಸ್ಸು, ಇಂದ್ರಿಯಗಳಲ್ಲಿಯ ಕಲ್ಮಷ ಕಳೆದುಕೊಂಡು ಲಿಂಗವಾಗಿವನ್ನಾಗಿ (ಹೂವಾಗಿ) ಮಾಡಿಕೊಳ್ಳಲು, ಗುರು-ದೇವತೆಯರ ಆಶೀರ್ವಾದ ಎಂಬ ಸೂರ್ಯನ ಕಿರಣಕ್ಕೆ ಶರಣಾಗೋಣ ಬನ್ನಿ.

About Author

Priya Bot

Leave A Reply