ಕೊಲೆ ಆರೊಪಿಯನ್ನು ಪತ್ತೆ ಮಾಡಿದ ತುಂಗಾ: ಯಾರು ಈ ತುಂಗ..!?

0

ದಾವಣಗೆರೆ

ಕಳೆದ ಮೂರು ದಿನಗಳ ಹಿಂದೆ ದಾವಣಗೆರೆ ಕಕ್ಕೆರಗೊಳ ಗ್ರಾಮದಲ್ಲಿ ಒಂಟಿ ಮಹಿಳೆಯನ್ನು ಕುತ್ತಿಗೆ ಟಾವಲ್ ಕಟ್ಟಿ ಕತ್ತು ಹಿಸುಕಿ ಕೊಲೆ ಮಾಡಲಾಯಿತ್ತು. ಕೊಲೆಗಾರ ಭಾರಿ ಚಾಲಾಕಿತನ ಪ್ರದರ್ಶನ ಮಾಡಿ ಯಾವುದೇ ಸಾಕ್ಷಿ ಬಿಡದೆ, ಒಂಟಿ ಮಹಿಳೆಯನ್ನು ಕೊಲೆ ಮಾಡಿದ್ದ. ಕಕ್ಕೆರಗೊಳ ಗ್ರಾಮದ ಒಂಟಿ ಮಹಿಳೆ, ಗೌರಮ್ಮಾ (75) ಅವರ ಕೊಲೆ ಮಾಡಲಾಗಿತ್ತು.

ಆದ್ರೆ ಯಾರು ಕೊಲೆ ಮಾಡಿದ್ದು ಎನ್ನುವುದು ಪೊಲೀಸ್ ಅವರಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಪೊಲೀಸರು ಸ್ಥಳಕ್ಕೆ ಶ್ವಾನ ದಳವನ್ನು ಕರೆಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಒಂಟಿ ವೃದ್ದೆ ಕೊಲೆ ಪ್ರಕರಣ ಶ್ವಾನ ತುಂಗಾ ಎಂಬ ಹೆಣ್ಣು ನಾಯಿ ಕೊಲೆಗಾರನನ್ನು ಪತ್ತೆ ಹಚ್ಚಿದೆ.  ಟಾವಲ್ ನಿಂದ ಕುತ್ತಿಗೆಗೆ ಗಂಟು ಹಾಕಿ ಆರೋಪಿ ರೇವಣಸಿದ್ದಪ್ಪ ಕೊಲೆ ಮಾಡಿದ್ದಾನೆ. ಹೀಗಾಗಿ ಟಾವೆಲ್ ವಾಸನೆಯ ಜಾಡು ಹಿಡಿದು ಬೆಣ್ಣು ಬಿದ್ದ ತುಂಗಾ ಆರೋಪಿಯನ್ನು ಪತ್ತೆ ಹಚ್ವಿದೆ.

ಹೀಗಾಗಿ ಕೊಲೆಗಾರ ರೇವಣಸಿದ್ದಪ್ಪ (48) ಅವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಆರೋಪಿ ರೇವಣಸಿದ್ದಪ್ಪ, ತಾನು ಮಾಡಿದ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ 4.10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜೆಪ್ತಿ ಮಾಡಲಾಗಿದೆ. ಪಡೆದ ಸಾಲ ಮರಳಿಸಲಾಗದೇ ದುರುದ್ದೇಶದಿಂದ ಗೌರಮ್ಮಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ. ವಶಕ್ಕೆ ಪಡೆದ  ಆರೋಪಿಯನ್ನು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply