ಆಶಾ ಕಾರ್ಯಕರ್ತೆಯರಿಗೆ ವಿಶ್ವಾಸ ಹೆಚ್ಚಿಸಲು ಉಡಿ ತುಂಬುವ ಕಾರ್ಯಕ್ರಮ

0

ಗದಗ – ಶಿರಹಟ್ಟಿ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆತ್ಮಸ್ಥೈರ್ಯ ತುಂಬಿ ವಿಶ್ವಾಸ ಹೆಚ್ಚಿಸಲು, ಭಾರತೀಯ ಕಿಸಾನ್ ಸಂಘ, ಹಿಂದೂ ಸೇವಾ ಪ್ರತಿಷ್ಠಾನ ಹಾಗೂ ಭಾರತೀಯ ಜನತಾ ಪಕ್ಷದ ಸಹಯೋಗದಲ್ಲಿ ತಾಲೂಕಿನ ಆಶಾ ಕಾರ್ಯಕರ್ತರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆರೋಗ್ಯ ಇಲಾಖೆಯ ತಳ ಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡುವ ಪ್ರತೀ ಹಳ್ಳಿಯ ಪ್ರತೀ ಗಲ್ಲಿಯ ಪ್ರತೀ ವ್ಯಕ್ತಿಯ ಯೋಗಕ್ಷೇಮ ವಿಚಾರಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ನಿಸ್ವಾರ್ಥ ಮನೋಭಾವದಿಂದ ಹಗಲಿರುಳು ಕಾರ್ಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಗೌರವಿಸುವ ಕೆಲಸವನ್ನು ಮಾಡುವುದು ಹಾಗೂ ಕರೋನಾ ಬರದಂತೆ ತಡೆಯಲು ಕನ್ಹೇರಿ ಮಠದವರು ಸಿದ್ದಪಡಿಸಿದ ಇಮ್ಯುನಿಟಿ ಬುಷ್ಠರ್ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹೆಬ್ಬಾಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ  ಭಿಮಸಿಂಗ್ ರಾಠೊಡ್ ಅವರು ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ ಮಾತನಾಡಿದರು‌. ಆಶಾ ಕಾರ್ಯಕರ್ತೆಯರ ಸೇವೆ ಅಮೊಘವಾದದ್ದು ಹಾಗೂ ಸವಾಲಿನದು ನಿಜಕ್ಕೂ ತಮ್ಮ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು. ಭಾರತೀಯ ಕಿಸಾನ್ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯರಾದ ಶ್ರೀಯುತ ವೀರಣ್ಣ ಮಜ್ಜಗಿಯವರು ಮಾತನಾಡಿ ವೈದ್ಯರು ಹಾಗೂ ಗ್ರಾಮೀಣ ಜನರ ಮಧ್ಯೆ ಆಶಾ ಕಾರ್ಯಕರ್ತರು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಎಂದು ಸ್ಮರಿಸಿದರು.

ಹಿಂದೂ ಸೇವಾ ಪ್ರತಿಷ್ಠಾನದ ನಟರಾಜ ರಾನಡೆಯವರು ಕನ್ಹೇರಿ ಮಠದ ಇಮ್ಯುನಿಟಿ ಬುಷ್ಟರ್ ಬಗ್ಗೆ ಮಾಹಿತಿ ನೀಡಿದರು.  ಕಾರ್ಯಕ್ರಮದಲ್ಲಿ ವಿರೇಶರೆಡ್ಡಿ ಕಾಮರೆಡ್ಡಿ, ಎಚ್,ಎಮ್,ಪಾಟೀಲ್, ಶಂಕ್ರಪ್ಪಾ ಸುಗ್ನಳ್ಳಿ, ಫಕ್ಕಿರಪ್ಪಾ ನರಸಮ್ಮನವರ್, ಚನ್ನವೀರಗೌಡ ತೆಗ್ಗಿನಮನಿ ವಿರೇಶ ಕುರವತ್ತಿ, ಪ್ರಶಾಂತ್ ಜಾಡರ್, ಭೀಮೇಶ್ ಬಾರಕೇರ್ ಕಾರ್ತಿಕ್ ಪಾಟೀಲ್ ರಂಗಪ್ಪಾ ನರಸಮ್ಮನವರ್ ಹಾಜರಿದ್ದರು. ಸಂಜೆ ಮಾಗಡಿಯಲ್ಲಿ ಕಾರ್ಯಕ್ರಮ ಸಮಾರೋಪ ಆಯಿತು. ಮಾಗಡಿ, ಪರಸಾಪುರ,ಹೊಳಲಾಪುರ ಹಾಗೂ ಚನ್ನಪಟ್ಟಣದ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply