ಅಪಾಯದ ಅರಿವಿಲ್ಲದ ಅಧಿಕಾರಿ…?

0

ವಿಜಯನಗರ – ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಹತ್ತಿರದ,ಹೈಮಾಸ್ಕ್ ಲೈಟ್ ಕಂಬದ ಬುಡದಲ್ಲಿರುವ ಕಂಟ್ರೋಲ್ ಬೋರ್ಡ್ ಯಾವುದೇ ಸುರಕ್ಷತೆ ಇಲ್ಲದ ಸ್ಥಿತಿಯಲ್ಲಿದೆ.ಬಾಕ್ಸ್ ಬಾಗಿಲು ಬಾಯ್ತೆರೆದಿದ್ದು ಕಂಬದ ಬುಡದಲ್ಲಿ ನೆಲದ ಮೇಲಿದ್ದು, ಮಕ್ಕಳು ಆಕಸ್ಮಿಕವಾಗಿ ತಾಗಿದರೂ ಕೂಡ ಯಾವ ಕ್ಷಣದಲ್ಲಾದರೂ ಯಾವುದೇ ಅನಾವುತ ಸಂಭವಿಸಬಹುದಾಗಿದೆ.

ಪಪಂ ಕಚೇರಿಯಿಂದ ಕೂಗಳೆತ ಅಂತರದಲ್ಲಿದ್ದು ಅಪಾಯಕ್ಕೆ ಆವ್ಹಾನಿಸುವ ದುಸ್ಥಿತಿ ನಿರ್ಮಾಣವಾಗಿದ್ದು,ಕಂಡೂ ಕಾಣದಂತಿರುವ ಸಂಬಂಧಿಸಿದ ಇಲಾಖಾಧಿಕಾರಿಯ ನಿರ್ಲಕ್ಷ್ಯಕ್ಕೆ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ತೀವ್ರ ವಿರೋಧ ಹಾಗೂ ಆಕ್ರಶೋ ವ್ಯಕ್ತವಾಗಿದೆ. ಶೀಘ್ರವೇ ಈ ದುರಾವಸ್ಥೆಯನ್ನು ಸುಸ್ಥಿತಿಗೆ ತರದಿದ್ದಲ್ಲಿ, ಸಂಭವಿಸಬಹುದಾದ ಅನಾಹುತ  ಮತ್ತು ಅವಘಡಗಳಿಗೆ ಅಧಿಕಾರಿಯೇ ಹೊಣೆಗಾರರಾಗಲಿದ್ದು,ನಿರ್ಲಕ್ಷ್ಯತೆ ಮುಂದುವರೆದಿದ್ದಲ್ಲಿ ಉನ್ನತಾಧಿಕಾರಿಗಳಲ್ಲಿ ದೂರು ನೀಡಲಾಗುವುದೆಂದು ಸಾರ್ವಜನಿಕರು ಈ ಮೂಲಕ ಎಚ್ಚರಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply