ಅಗತ್ಯ ವಸ್ತುಗಳ ಖರೀದಿಗೆ ಅನ್ ಲಾಕ್.

0

ರಾಯಚೂರು – ರಾಯಚೂರು ಜಿಲ್ಲೆಯಾದ್ಯಂತ ಕೊರೊನಾ ಸೋಂಕು ಹಿನ್ನಲೆಯಲ್ಲಿ ಜಾರಿ ಮಾಡಿರುವ ಲಾಕ್ ಡೌನ್ ನ್ನು ಸಾರ್ವಜನಿಕರು ಜೀವನೋಪಾಯ ವಸ್ತುಗಳ ಖರೀದಿಗೆ ಇಂದು 6ರಿಂದ 2 ಗಂಟೆಯವರೆಗೆ ಅನ್ ಲಾಕ್ ಮಾಡಲಾಗಿದೆ. ಜೀವನೋಪಾಯಕ್ಕೆ ಅಗತ್ಯವಿರುವ ಹಾಲು, ಹಣ್ಣು, ಹೂ, ತರಕಾರಿ, ಮಾಂಸ, ಕಿರಣಿ ಅಂಗಡಿಗಳು ಓಪನ್ ಮಾಡಲು ಅವಕಾಶ ಕಲ್ಪಿಸುವ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ. ಹೀಗಾಗಿ ಸಾರ್ವಜನಿಕರು ಮಾರುಕಟ್ಟೆಗೆ ಆಗಮಿಸುವ ಮೂಲಕ ಅಗತ್ಯ ವಸ್ತುಗಳ ಖರೀದಿಗೆ ಹೊರ ಬಂದಿದ್ದರು.

 ಕೆಲ ಸಮಯದವರೆಗೆ  ಲಾಕ್ ಡೌನ್ ವಿನಾಯಿತಿ ನೀಡಿದ್ರು, ಕೋವಿಡ್ ನಿಯಮಗಳ ಅನುಸರಣೆ ಮಾಡುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪೊಲೀಸ್ ಹಾಗೂ ಹೋಮ್ ಗಾರ್ಡ್ ಗಳು ಕರ್ತವ್ಯರು  ತರಕಾರಿ ಮಾರುಕಟ್ಟೆಯಲ್ಲಿ ಜನರಿಗೆ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಪೊಲೀಸ್ ರು ಹೇಳುತ್ತಿದ್ದು, ನಿಯಮ ಪಾಲಿಸುವುದಕ್ಕೆ ಹೈರಾಣು ಹೋದರು.  ಇನ್ನೂ ತರಕಾರಿ ಮಾರುಕಟ್ಟೆಯಲ್ಲಿ ಜನ-ಜಂಗುಳಿ ಕಂಡು ಬಂತು. ಮುಂಗಾರು ಹಿನ್ನಲೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲಕ್ಕಾಗಿ ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ.

 6 ದಿನಗಳಿಗೊಮ್ಮೆ ಮದ್ಯ ಮಾರಾಟ ಅಂಗಡಿಗಳಿಗೆ ಓಪನ್ ಆಗುತ್ತಿದ್ದು, ಮದ್ಯ ಪ್ರೀಯರು ಮದ್ಯವನ್ನ ಕೊಳ್ಳಲು ಬೆಳಿಗ್ಗೆ ಅಂಗಡಿಯ ಬಳಿಕ ಸರತಿ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದು, ಭಾರಿ ಕ್ಯೂ ನಿಂತಿರುವುದು ಕಂಡು ಬಂತು. ಲಾಕ್ ಡೌನ್ ನಿಂದ ಬಿಕೋ ಎನ್ನುತ್ತಿದ್ದ ರಸ್ತೆ ಕೆಲವೊತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದರಿಂದ ನಗರದಲ್ಲಿ ಜನರು ಓಡಾಟ ಮಾಡುವ ದೃಶ್ಯಗಳು ಕಂಡು ಬಂತು. ಮಧ್ಯಾಹ್ನ 2 ಗಂಟೆಯವರಗೆ ಜೀವನೋಪಾಯ  ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಮಧ್ಯಾಹ್ನ 2 ಗಂಟೆಯ ನಂತರ ಯಥಾವತ್ತಾಗಿ ಮೂರು ದಿನಗಳ ಕಠಿಣ ಲಾಕ್ ಡೌನ್ ಜಾರಿಯಾಗಲಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply