ಬಳ್ಳಾರಿ-ವಿಶ್ವವಿದ್ಯಾಲಯದಲ್ಲಿ ಗಳಿಸಿದ ಜ್ಞಾನವನ್ನು ಮಾನವೀಯತೆಯೊಂದಿಗೆ ಬೆಸೆದು ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಮತ್ತು ಸಮಾಜದ ಒಳಿತಿಗೆ ಗಣನೀಯ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದು ವಿಶ್ವವಿದ್ಯಾಲಯದ ಧನಸಹಾಯ ಆಯೋಗದ ಕಾರ್ಯದರ್ಶಿಗಳಾದ ಪ್ರೊ.ರಜನೀಶ್ ಜೈನ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿವಿಯ 8ನೇ ಘಟಿಕೋತ್ಸವದಲ್ಲಿ ಆನ್ಲೈನ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು.

ಓರ್ವ ಸಾಮಾನ್ಯನು ತನ್ನ ಜೀವನದ ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಪಡೆದುಕೊಳ್ಳುವ, ಚಾರಿತ್ರ್ಯದ ದೃಢತ್ವವನ್ನು ಹೊರೆಸೆಳೆಯುವ, ತನ್ನನ್ನು ತಾನು ಪರಿಪೂರ್ಣ ವ್ಯಕ್ತಿಯಾಗಿ ಸ್ವಯಂ ನಿರ್ಮಿಸಿಕೊಳ್ಳಲು ಬೇಕಾಗುವ ಮಹತ್ವಾಕಾಂಕ್ಷೆ ಮತ್ತು ಧೈರ್ಯ ಇವೆಲ್ಲವುಗಳನ್ನು ಒದಗಿಸುವ ಶಿಕ್ಷಣ ವ್ಯವಸ್ಥೆಯನ್ನು ಪಡೆಯುವ ಅಗತ್ಯತೆ ನಮಗಿದೆ ಎಂದು ಅವರು ಪ್ರತಿಪಾದಿಸಿದರು.

ಜಾಗತಿಕ ಆಸಕ್ತಿಯಲ್ಲಿ ಭಾರತವು ಹುರುಪಿನ ಜ್ಞಾನ ಸಮಾಜದ ಮತ್ತು ಆರ್ಥಿಕತೆಗಾಗಿ ಶ್ರಮಿಸುತ್ತಿದೆ. ನಾಲ್ಕನೇ ಕೈಗಾರಿಕಾ ಕ್ರಾಂತಿ ಮುಂದಿನ ತಲೆಮಾರಿನ ಪ್ರಸ್ತುತತೆ ಮತ್ತು ಭವಿಷ್ಯದ ತಂತ್ರಜ್ಞಾನಗಳು ಉದ್ಯೋಗಗಳ ಸರಾಸರಿಯನ್ನು ಹಾಗೂ ಅದರ ಬಹುಮುಖಿ ಅವಕಾಶಗಳಲ್ಲಿ ಹೆಚ್ಚಿಸುತ್ತದೆ. ಅದರಂತೆಯೇ, ನಮ್ಮ ಉನ್ನತ ಶಿಕ್ಷಣವು ಜನರಿಗೆ ಇಂತಹ ಪ್ರಧಾನವಾದ ಆಕಾಂಕ್ಷೆಗಳನ್ನು ಕಲ್ಪಿಸುವಲ್ಲಿ ಮರು-ಕಲ್ಪಿಸುವ ಮರು ಕೇಂದ್ರಿಸುವ, ಪರಿಷ್ಕರಿಸುವ ಮತ್ತು ಮರುಶಕ್ತಿ ಹೊಂದುವುದು ಅವಶ್ಯಕವಾಗಿದೆ ಎಂದು ಹೇಳಿದರು.

About Author

Priya Bot

Leave A Reply