ಕಲ್ಲು ಗಣಿಗಾರಿಕೆಗೆ ನಲುಗಿದ ವಿಜಯಪುರ

0

ವಿಜಯಪುರ  – ವಿಜಯಪುರ ನಗರದ ಹೊರ ಭಾಗದಲ್ಲಿ ಕಲ್ಲು ಕ್ರಷರ್ ಘಟಕಗಳ ಸಮೂಹವೇ ಇವೆ. ವಿಜಯಪುರ ತಾಲೂಕಿನ ಅಲಿಯಾಬಾದ್  ಬುರಣಾಪುರ ಸೇರಿದಂತೆ ಇತರೆ ಗ್ರಾಮಗಳ ಮಧ್ಯದಲ್ಲಿಯೇ ಹತ್ತಾರು ಜಲ್ಲಿ ಕಲ್ಲು ಕ್ರಷರ್ ಘಟಕಗಳು ತಲೆ ಎತ್ತಿವೆ. ಇಲ್ಲಿನ ಹಲವಾರು ಕಲ್ಲಿನ  ಕ್ರಷರ್ ಗಳು ಅಕ್ರಮವಾಗಿ ಕ್ರಷಿಂಗ್ ಹಾಗೂ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಆರೋಪ ಮೊದಲಿನಿಂದಲೂ ಕೇಳಿ ಬಂದಿವೆ. ಇಂದು ಇಂಥದ್ದೇ ಒಂದು ಕಲ್ಲಿನ ಗಣಿಯಲ್ಲಿ ನಿಯಮ ಬಾಹಿರವಾಗಿ ಬ್ಲಾಸ್ಟ್ ಮಾಡಿದ ಕಾರಣ ಓರ್ವನ ಪ್ರಾಣ ಪಕ್ಷಿ  ಹಾರಿ ಹೋಗಿದೆ. ಘಟನೆಯಲ್ಲಿ  ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.

 

ವಿಜಯಪುರ ನಗರದ ಹೊರಭಾಗದ ಖಾಸಗಿ ಆಸ್ಪತ್ರೆ ಮುಂಭಾಗ ಬಿಕ್ಕಿ ಬಿಕ್ಕಿ ಅಳುತ್ತಿರುವ ಕುಟುಂಬಸ್ಥರ ದೃಶ್ಯ ಒಂದೆಡೆಯಾದರೆ, ಇನ್ನೊಂದೆಡೆ ಆಕ್ರಮ ಗಣಿ ಗಾರಿಕೆ ವಿಕ್ಷಣೆ ಮಾಎಉತ್ತಿರುವ ಎಸ್ ಪಿ ಅನುಪಮ ಅಗರವಾಲ್ ದೃಶ್ಯ, ಇವೆಲ್ಲವೂ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯಲ್ಲಿ, ಹೌದು ವಿಜಯಪುರ ತಾಲೂಕಿನ ಅಲಿಯಾಬಾದ್ ಬಳಿಯ ಸಾವಳಗಿ ಕ್ರಷರ ಘಟಕದ ಆವರಣದಲ್ಲಿ ನಿನ್ನೆ   ಬ್ಲಾಸ್ಟ್ ಮಾಡಿದ್ದಾರೆ. ಸಾವಳಗಿ ಎಂಬುವವರಿಗೆ ಸೇರಿದ ಕ್ರಷರ್ ಘಟಕದಲ್ಲಿ ಬ್ಲಾಸ್ಟ ಮಾಡಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವಿಗೀಡಾದರೆ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಇಲ್ಲಿ ಕಲ್ಲು ತೆಗೆಯಲು ಬ್ಲಾಸ್ಟ್ ಮಾಡಿದ್ದಾರೆ. ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಮೋಹನ್ ನಾಯ್ಕ್, ಗಿರೀಶ್ ಹಳ್ಳಿ ಹಾಗೂ ಸಚಿನ್ ಹಳ್ಳಿಗೆ ಬ್ಲಾಸ್ಟ್ ಮಾಡಿದ ಪರಿಣಾಮ ಸಿಡಿದ ಕಲ್ಲುಗಳು ಬಂದು ಬಡಿದಿವೆ. ಮೋಹನ್ ನಾಯ್ಕ್ ಕಾಲಿಗೆ ಹಾಗು ದೇಹದ ಇತರೆ ಭಾಗಕ್ಕೆ ಕಲ್ಲು ಬಿರುಸಾಗಿ ಬಡಿದಿವೆ.

ಇನ್ನು ಗಿರೀಶ ಹಳ್ಳಿ, ಸಚಿನ್ ಹಳ್ಳಿಗೂ ಕಲ್ಲು ತಾಗಿ ತೀವ್ರವಾಗಿ ಬಡಿದಿವೆ. ಇಷ್ಟಾಗುತ್ತಿದ್ದಂತೆ ಸಾವಳಗಿ ಕ್ರಷರ್ ಘಟಕದಲ್ಲಿದ್ದವರು ಅಲ್ಲಿಂದ ಓಡಿ ಹೋಗಿದ್ದಾರೆ. ಇದನ್ನು ಕಂಡು ಸುತ್ತಮುತ್ತಲಿನ ಕ್ರಷರ್ ಘಟಕದವರು ಕಲ್ಲಿನ ಬ್ಲಾಸ್ಟ್ ನಲ್ಲಿ ತೀವ್ರವಾಗಿ ಗಾಯಗೊಂಡ ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೋಹನ್ ನಾಯ್ಕ್ (45)  ಮೃತಪಟ್ಟಿದ್ದಾರೆ. ಗಿರೀಶ ಹಳ್ಳಿ ಮತ್ತು ಸಚಿನ್ ಹಳ್ಳಿ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಸಾವಳಗಿ ಕ್ರಷರ್ ಘಟಕದವರದ್ದೇ ತಪ್ಪು. ನಾವೆಲ್ಲಾ ಈಗಲೇ ಬ್ಲಾಸ್ಟ್ ಮಾಡಬೇಡಿ ಎಂದು ಹೇಳಿದರೂ ಕೇಳಲಿಲ್ಲಾ. ರಾತ್ರಿ ವೇಳೆಯಲ್ಲಿ ಮಾಡುವ ಬ್ಲಾಸ್ಟ್ ನನ್ನು ಬೇಕಾಬಿಟ್ಟಿಯಾಗಿ ಮನಸ್ಸಿಗೆ ಬಂದ  ವೇಳೆಯಲ್ಲಿ ಮಾಡುತ್ತಾರೆ. ಏನಾದರೂ ಹೇಳಲೂ ದೌರ್ಜನ್ಯ ಮಾಡುತ್ತಾರೆ. ಇದಕ್ಕೆಲ್ಲಾ ಸಾವಳಗಿ ಕ್ರಷರ್ ಘಟಕದವರದ್ದೇ ತಪ್ಪು. ಮೋಹನ್ ನಾಯ್ಕ, ಗಿರಿಶ್ ಹಾಗೂ ಸಚಿವ ರಸ್ತೆ ಬದಿಗೆ ನಿಂತಿದ್ದರು. ಇಲ್ಲಿ  ಕಲ್ಲು ಬ್ಲಾಸ್ಟ್ ಮಾಡಿದ ಕಾರಣ ಈ ಅನಾಹುತವಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ…

ಮೂಲತಃ ಅಲಿಯಾಬಾದ್ ತಾಂಡಾದ ವಾಸಿಯಾಗಿದ್ದ ಮೋಹನ್ ನಾಯ್ಕ ಇತ್ತೀಚೆಗೆ ಕ್ರಷರ್ ಘಟಕವೊಂದರಲ್ಲಿ ಕೆಲಸಕ್ಕೆ ಸೇರಿದ್ದನಂತೆ. ವಿಜಯಪುರದಿಂದ ಅಲಿಯಾಬಾದ್ ತಾಂಡಾದಲ್ಲಿನ ತನ್ನ ಮನೆಗೆ ಆಗಮಿಸುತ್ತಿರುವಾಗ ಕೆಲಸದ ನಿಮಿತ್ಯ ಸಾವಳಗಿ ಕ್ರಷರ್ ಘಟಕದ ಬಳಿ ರಸ್ತೆಯ ಮೇಲೆ ಗಿರೀಶ್ ಹಾಗೂ ಸಚಿನ್ ಜೊತೆಗೆ ನಿಂತಿದ್ದಾಗಲೇ ಬ್ಲಾಸ್ಟ್ ಮಾಡಿದ್ದಾರೆ. ಸರ್ಕಾರದ ನಿಯಮದ  ಪ್ರಕಾರ ರಾತ್ರಿ ವೇಳೆ ಕಲ್ಲು ಬ್ಲಾಸ್ಟ್ ಮಾಡಬೇಕು. ಸ್ಫೋಟ ಮಾಡಲು ಪರವಾನಿಗೆ ಹೊಂದಿದವರಿಂದ ಸ್ಪೋಟ ಮಾಡಿಸಬೇಕೆಂದು ನಿಯಮವಿದೆ. ಆದರೆ ಸಾವಳಗಿ ಕ್ರಷರ್  ಘಟಕದವರು ಯಾವುದೇ ನಿಯಮ ಪಾಲನೆ ಮಾಡುವುದಿಲ್ಲವಂತೆ. ಜೊತೆಗೆ ಸ್ಪೋಟ ಮಾಡುವುದನ್ನೂ ಅಕ್ರಮವಾಗಿಯೇ ಮಾಡುತ್ತಾರಂತೆ.

ಇದೇ ಕಾರಣದಿಂದ ಇಂದು ನಡೆಯಬಾರದ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಮೋಹನ್ ನಾಯ್ಕ್ ಪತ್ನಿ, ತಾಯಿ ಸಹೋದರಿಯರು ಹಾಗೂ ಸಂಬಂಧಿಕರು ನೆಲ ಬಡಿದು ಕಣ್ಣೀರು ಹಾಕಿದರು. ಪತ್ನಿ ಹಾಗೂ ಮಕ್ಕಳು ಅನಾಥರಾದಲ್ಲಾ ಎಂದು ರೋಧಿಸಿದರು. ಘಟನೆಗೆ ಕಾರಣವಾದವರ ಮೇಲೆ  ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ನಿತ್ಯ ಕೂಲಿನಾಲಿ ಮಾಡಿ ಪತ್ನಿ ಮಕ್ಕಳನ್ನು ಸಾಕುತ್ತಿದ್ದ ಮೋಹನ್ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು. ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ ಸಂಬಂಧಿಕರು. ಸುದ್ದಿ  ತಿಳಿಯುತ್ತಿದ್ದಂತೆ ವಿಜಯಪುರ ಗ್ರಾಮೀಣ ಪೊಲೀಸರು ಹಾಗೂ ಎಸ್ ಪಿ ಅನುಪಮ್ ಅಗ್ರವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್ ಪಿ ಅವರಿಗೆ ಎ ಎಸ್ ಪಿ ಡಾ ರಾಮ್ ಅರಸಿದ್ದಿ ಸೇರಿದಂತೆ ಇತರೆ ಆಧಿಕಾರಿಗಳು ಸಾಥ್ ನೀಡಿದರು.

ಘಟನೆ ಜರುಗಿದ ಸ್ಥಳದ ಪರಿಶೀಲನೆ ನಡೆಸಿದರು. ಬ್ಲಾಸ್ಟಿಂಗ್ ನಡೆದ ಸ್ಥಳ, ಮೋಹನ್ ಹಾಗೂ ಇನ್ನಿಬ್ಬರಿಗೆ ಕಲ್ಲುಗಳು ಬಡಿದ  ಜಾಗದಲ್ಲಿಯೂ ಮೆಹಜರ್ ನಡೆಸಿದರು. ಪ್ರಾಥಮಿಕವಾಗಿ ನಾವು ಮಾಹಿತಿ ಕೆಲ ಹಾಕಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಅಶೋಕ ಸಾವಳಗಿ ಎಂಬವವರ ಪತ್ನಿಯ ಹೆಸರಿನಲ್ಲಿ ಕ್ರಷರ್ ಘಟಕವಿದೆ. ಇಂದು ನಡೆದ ಸ್ಪೋಟದ ವಿಚಾರವಾಗಿ ಸಮಗ್ರ ತನಿಖೆ ಮಾಡಲಾಗುತ್ತದೆ. ಇಲ್ಲಿ ನಡೆಯುತ್ತಿರುವ ಕ್ರಷರ್ ಘಟಕ, ಕಲ್ಲು ಗಣಿಗಾರಿಕೆ ಸಕ್ರಮವೋ ಅಕ್ರಮವೋ ಎಂಬುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಆಧಿಕಾರಿಗಳ ಮೂಲಕ ಪರಿಶೀಲಿಸಲಾಗುತ್ತದೆ. ಇಲ್ಲಿ ತೆಗೆದಿರುವ ಕಲ್ಲಿನ ಪ್ರಮಾಣದ ಬಗ್ಗೆಯೂ ತನಿಖೆ ನಡೆಸುತ್ತೇವೆ. ಇಂದು ನಡೆದ ಬ್ಲಾಸ್ಟ್ ಹೇಗಾಯ್ತು, ಯಾರಿಂದ ಸ್ಪೋಟ ಮಾಡಿಸಿದರು. ಅಕ್ರಮವಾಗಿ ಸ್ಫೋಟ ಮಾಡಲಾಯ್ತಾ. ಅನುಮತಿ ಹೊಂದಿದವರು ಸ್ಪೋಟ ಮಾಡಿದರಾ ಎಂಬಿತ್ಯಾದಿ ಸಮಗ್ರ ತನಿಖೆ ನಡೆಯಲಿದೆ. ತಪ್ಪಿತಸ್ಥರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply