ಮುಂಬೈ- ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇಂದು ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಹಿಂದೆ ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಯೋಗಾಭ್ಯಾಸ ಮಾಡಿಸುವ ಪೋಟೋಗಳನ್ನು ಕೊಹ್ಲಿ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು , ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈಗ ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಅನುಷ್ಕಾ ಶರ್ಮಾ ತಮ್ಮ ಹಳೆಯ ಫೋಟೋವನ್ನು ಹಂಚಿಕೊಂಡಿದ್ದ , ಗರ್ಭವತಿಯಾದ ಸಮಯದಲ್ಲೂ ಯೋಗ ಮಾಡುವುದು ಮುಖ್ಯ ಎಂದು ಹೇಳುವ ಮೂಲಕ ಕೋಟ್ಯಾಂತರ ಮಹಿಳೆಯರು ಮನಗೆದಿದ್ದರು. ಅಲ್ಲದೇ ಅವರು ಹಂಚಿಕೊಂಡಿದ್ದ ಫೋಟೋ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದ್ದು, ರಕುಲ್ ಪ್ರೀತ್ ಸಿಂಗ್ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ನಟ-ನಟಿಯರು ಅನುಷ್ಕಾ ಫೋಟೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದು ಬೆಳಗಿನ ಜಾವ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಅನುಷ್ಕಾ ಅವರನ್ನು ಸೇರಿಸಲಾಗಿತ್ತು. ಸದ್ಯ ಹೆರಿಗೆ ಆಗಿದ್ದು ಅನುಷ್ಕಾ ಹಾಗೂ ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ….