ಮುಂಬೈ- ಇತ್ತೀಚೆಗಷ್ಟೆ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಬರಮಾಡಿಕೊಂದ ಬಾಲಿವುಡ್ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ.   ಅನುಷ್ಕಾ ಶರ್ಮಾ ಜನವರಿ 11 ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಮಗಳ ಬರಮಾಡಿಕೊಂಡ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಭಿಮಾನಿಗಳೊಂದಿಗೆ  ಸಂತಸ ಹಂಚಿಕೊಂಡಿದ್ದರು. ಇದೀಗ್ ಮಗಳಿಗೆ ನಾಮಕರಣ ಮಾಡುವುದರ ಮೂಲಕ ಈ ಜೋಡಿ ಮತ್ತೆ ಸುದ್ದಿಯಾಗಿದ್ದಾರೆ.

ವಿರುಷ್ಕಾ ದಂಪತಿ ತಮ್ಮ ಮಗಳಿಗೆ ಏನು ಹೆಸರಿಡುತ್ತಾರೆ ಎಂಬ ಕೂತುಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಆ ಕೂತುಹಲಕ್ಕೆ ಈಗ ತೆರೆ ಬಿದ್ದಿದೆ. ವಿರುಷ್ಕಾ ದಂಪತಿ ಮಗಳಿಗೆ ‘ವಮಿಕಾ’ ಎಂದು ನಾಮಕರಣ ಮಾಡಿದ್ದಾರೆ. ನಂತರ ಮಗುವಿನ ಜೊತೆಗಿನ ಪೋಟೋವನ್ನು ಹಂಚಿಕೊಂಡು ‘ನಮ್ಮ ಹೊಸ ಜಗತ್ತು’ ಎಂದು ಸಂತಸ ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಅವರ ಹೆಸರಿನ ಮೊದಲ ಅಕ್ಷರ ಮತ್ತು ಅನುಷ್ಕಾ ಶರ್ಮಾ ಅವರ ಹೆಸರಿನ ಕೊನೆಯ  ಅಕ್ಷರವನ್ನು ತೆಗೆದುಕೊಂಡು ಮಗಳಿಗೆ ‘ವಮಿಕಾ’ ಎಂದು ಹೆಸರಿಟ್ಟದ್ದಾರೆ.

About Author

Priya Bot

Leave A Reply