ರೈತರ ಪಾಲಿಗೆ ಸೋನು ಸೂದ್ ಆದ ಮಂಗಳೂರಿನ ವಿವೇಕ್ ರಾಜ್ ಪೂಜಾರಿ

0

ಮಂಗಳೂರು – ರಾಜ್ಯದ ಹಲವಾರು ಜಿಲ್ಲೆಗಳಲ್ಲಿ  ರೈತರು ತಾವು ಬೆಳೆದ  ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಲು ಯಾರು ಮುಂದೆ ಬಾರದೇ ಇರುವುದರಿಂದ ತಮ್ಮ ಬೆಳೆಗಳನ್ನು ಬೀದಿಗೆ ಸುರಿಯುವುದನ್ನು  ನೋಡಿದ್ದೇನೆ. ಇನ್ನು ಮುಂದಕ್ಕೆ  ರೈತರು ತಾವು ಬೆಳೆದ  ಬೆಳೆದ ತರಕಾರಿ, ಹಣ್ಣುಗಳನ್ನು ನಮ್ಮ ಸಂಸ್ಥೆಯ ಸಿಬ್ಬಂದಿಗೆ, ಅವರ ಸ್ಥಳಗಳಿಗೆ ಫಾರ್ಮ್ ಗಳಿಗೆ ಬಂದು  ನಮ್ಮ ಪನಾಮ ಕಂಪೆನಿ  ಖರೀದಿ ಮಾಡಲಿದೆ.

ಅಂತಹ ರೈತರಿಗೆ ಸೂಕ್ತ ಬೆಲೆ ನೀಡಿ ಖರೀದಿಸುವ ಮೂಲಕ ಅವರಿಗೆ ಸಹಾಯ ನೀಡಲಿದೆ ಎಂದು ಮಂಗಳೂರಲ್ಲಿ ಪನಮಾ ನೇಚರ್ ಫ್ರೆಶ್ ಸಂಸ್ಥೆಯ ಅಧ್ಯಕ್ಷ ವಿವೇಕ್ ರಾಜ್ ಹೇಳಿದ್ದಾರೆ. ಮಂಗಳೂರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,  ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ  ಸುಮಾರು ೭೫ ಕೋಟಿ ರೂಪಾಯಿ ವೆಚ್ಚದಲ್ಲಿ  ಕೃಷಿಕರು  ಬೆಳೆದ ಉತ್ಪನ್ನಗಳನ್ನು ಖರೀದಿಸುವ ಯೋಜನೆಯನ್ನು ಕೈಗೊಂಡಿದ್ದೇನೆ ಎಂದು ಹೇಳಿದರು.

ಕೊರೊನಾದಿಂದ ಜನಜೀವನ  ಸರಿಯಾಗಲು ಬಹಳ ಸಮಯ ಹಿಡಿಯಲಿದೆ. ಹೀಗಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗಲು  ಮುಂಜಾಗ್ರತಾ ಕ್ರಮವಾಗಿ 50 ಲಕ್ಷವನ್ನು ಇಟ್ಟಿದ್ದೇನೆ ಎಂದರು.ಈವರೆಗೆ 16೦೦೦  ಮಂದಿಗೆ ಊಟ, ಸುಮಾರು 4350 ಕುಟುಂಬದವರಿಗೆ ಮತ್ತು  ದಿನಗೂಲಿ ನೌಕರರಿಗೆ ಕಿಟ್ ಗಳನ್ನೂ ನೀಡಲಾಗಿದೆ. ಜೊತೆಗೆ ಹಲವು ಬಡ ಕುಟುಂಬಗಳ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಸಹ  ಪನಾಮ ಕಂಪೆನಿ ವತಿಯಿಂದ ಭರಿಸಲಾಗಿದೆ. ಪ್ರಸಕ್ತ ತಮ್ಮ ಕಡೆಯಿಂದ ನೀಡುವ  ಕಿಟ್ ಒಂದು ಕುಟುಂಬಕ್ಕೆ 15 ದಿನಗಳ ಕಾಲ ಉಪಯೋಗಕ್ಕೆ ಬರಲಿದೆ.  ಇದು ಹಲವು ಕುಟುಂಬಗಳಿಗೆ ಸಹಾಯವಾಗಲಿದೆ.

ಕಳೆದ ಲಾಕ್ ಡೌನ್ ವೇಳೆ ಸುಮಾರು ೧೪೦೦೦  ಮಂದಿಗೆ  ಬೀದಿ ಬದಿ ಊಟ ವಿತರಿಸಿದ್ದೇವೆ. ೨೦೦೦ ಮಂದಿಗೆ ಕಿಟ್, 12 ಮಂದಿಗೆ  ಮಾರಲು ತಳ್ಳುಗಾಡಿಯಲ್ಲಿ ಗಾಡಿ ತುಂಬಾ ತರಕಾರಿ ಮತ್ತು  ೫೦ ದೊಡ್ಡ ದೊಡ್ಡ ಕೊಡೆಗಳನ್ನು  ಉಚಿತವಾಗಿ  ಸಹ ನೀಡಲಾಗಿದೆ. ಜೊತೆ ತಮ್ಮ ಊರಿಗೆ ಹೋಗಲು ಸಂಕಷ್ಟದಲ್ಲಿದ್ದಾಗ  ಆರ್ಥಿಕ ಸಹಾಯ ಮಾಡಿದ್ದಾರೆ.

ಇದೇ ವೇಳೆ ಸರ್ಕಾರ ಈ ಬಾರಿಯ  ಲಾಕ್ ಡೌನ್‌ನಲ್ಲಿ ಮಾಡಿದ ವ್ಯವಸ್ಥೆಗಳು   ಸಂಪೂರ್ಣ ವಿಫಲವಾಗಿದೆ ಎಂದ ಅವರು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಜನರ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ. ಈ  ಬಾರಿ  ಸರಕಾರ  ಸಾರ್ವಜನಿಕರನ್ನು ಕಳೆದ ಬಾರಿಗಿಂತ  ಜಾಸ್ತಿ ನೆಗ್ಲೆಕ್ಟ್ ಮಾಡಿದೆ ಎಂದು ಕಿಡಿಕಾರಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply