ಬಳ್ಳಾರಿ- ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಕಕ್ಕುಪ್ಪಿ ಗ್ರಾ,ಪಂ ವ್ಯಾಪ್ತಿಯ ವಿರುಪಾಪುರ ಗ್ರಾಮದಲ್ಲಿ, ಕಳೆದ ಎರೆಡು ವರ್ಷಗಳಿಂದ ನಿರಂತರ ನೀರಿನ ಹಾಹಾಕಾರ ಸೃಷ್ಠಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮ‍ಗಾರಿ ವೇಳೆ,ರಸ್ಥೆ ಹಾದು ಹೋಗಿದ್ದ ನೀರು ಪೂರೈಸುವ ಪೈಪ್ ಗಳು ಕತ್ತರಿಸಿವೆ. ಆಗಿನಿಂದ ಈವರೆಗೂ ಅವುಗಳು ಸಂಪರ್ಕ ಹೊಂದಿಲ್ಲ ಕಾರಣ ಸಾಕಷ್ಟು ನೀರು ಪೂರೈಕೆಯಾಗುತ್ತಿಲ್ಲ,

ಕಳೆದೆರೆಡು ವರ್ಷಗಳಿಂದ ಹೀಗೆಯೇ  ನಾಲ್ಕು ಕೊಡ ನೀರಿಗಾಗಿ ಪ್ರತಿ ನಿತ್ಯ ಪರದಾಡುವಂತಾಗಿದೆ. ಗ್ರಾ,ಪಂ ಅಧಿಕಾರಿ,ತಾಪಂ ಅಧಿಕಾರಿ,ಪ್ರಭಾವಿ ಜನಪ್ರತಿನಿಧಿಗಳು ಆಲಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಡೀ ಗ್ರಾಮಕ್ಕೆ ಕೇವಲ ಎರೆಡೇ ಮಿನಿ ನೀರಿನ ಟ್ಯಾಂಕ್ ಇವೆ,ಅವುಗಳಿಗೆ ಸಾಕಷ್ಟು ನೀರು ಸಮರ್ಪಕವಾಗಿ ಪೂರೈಸಲಾಗುತ್ತಿಲ್ಲ. ಪರಿಣಾಮ ನಿತ್ಯ ನೀರಿಗಾಗಿ ದಿನಪೂರ್ತಿ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ,ಇಲ್ಲವೇ ಕಿಲೊ ಮೀಟರ್ ದೂರದ ಹೊಲಗಳ ಪಂಪ್ ಸೆಟ್ ನೀರೇ ಗತಿ.ನೀರು ಬೇಕೆಂದರೆ ಮನೆಗೊಬ್ಬರು ಹಗಲಿರುಳು ಸರತಿ ಸಾಲಿನಲ್ಲಿರಬೇಕಾಗಿದೆ, ಸಮಸ್ಯೆ ಕುರಿತು ಸಾಕಷ್ಟು ಬಾರಿ,ಗ್ರಾಪಂ ಅಧಿಕಾರಿಗೆ ಹಾಗೂ ತಾಲೂಕು ಪಂಚಾಯ್ತಿ ಅಧಿಕಾರಿಗೆ ತಹಶಿಲ್ದಾರ ಗಮನಕ್ಕೆ ತರಲಾಗಿದ್ದು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

 

Leave A Reply