ನಾಲಿಗೆ ಒಳ್ಳೆಯದಾದರೆ ?

0

ಡಾ. ಈಶ್ವರಾನಂದ ಸ್ವಾಮೀಜಿ  

‘ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ವಾಣಿಯಂತೆ ‘ಮಾತೆ ಮುತ್ತು ಮಾತೆ ಮೃತ್ಯು’, ಮಾತು ಆಡಿದರೆ ಬರದು ಮುತ್ತು ಒಡೆದರೆ ಬರದು’, ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು’ ಎಂಬ ಹಲವಾರು ಗಾದೆ ಮತುಗಳು ನಾಲಿಗೆಯಲ್ಲಿ ಉಂಟಾಗುವ ಮಾತಿನ ಮಹಿಮೆಯನ್ನು ಸಾರುತ್ತವೆ. ಮಾತು ಮಾನವನ ಅಂತರಂಗ ಅಳೆಯುವ ಮೈಲಿಗಲ್ಲು. ಮಾತಿನಿಂದ ಜೀವನದ ಸಾರ್ಥಕತೆಯನ್ನು ಪಡೆಯಲು ಸಂಸ್ಕøತ ಸುಭಾಷಿತವು ನಾಲಿಗೆಯ ಬಗ್ಗೆ ಹೀಗೆ ಹೇಳುತ್ತದೆ.-

ಲಕ್ಷ್ಮೀರ್ವಸತಿ ಜಿವ್ಹಾಗ್ರೇ, ಜಿವ್ಹಾಗ್ರೇ ಮಿತ್ರಬಾಂಧವಾಃ |
ಜಿವ್ಹಾಗ್ರೇ ಬಂಧನಂ ಪ್ರಾಪ್ತಂ, ಜಿವ್ಹಾಗ್ರೇ ಮರಣಂ ದ್ರುವಮ್ ||
ನಾಲಿಗೆಯ ತುದಿಯಲ್ಲಿ ಲಕ್ಷ್ಮೀ (ಸಂಪತ್ತು) ವಾಸವಾಗಿದ್ದಾಳೆ. ನಾಲಿಗೆಯ ತುದಿಯಲ್ಲಿ ಬಂಧು ಬಾಂಧವರ ಸ್ನೇಹ ಅಡಗಿದೆ. ನಾಲಿಗೆಯ ತುದಿಯಲ್ಲಿಯೇ ಬಂಧನ ಮೋಕ್ಷಗಳು ಉಂಟಾಗುತ್ತವೆ. ನಾಲಿಗೆಯ ತುದಿಯಿಂದ ಜನನ-ಮರಣಗಳು ಘಟಿಸುತ್ತವೆ. ಆದ್ದರಿಂದಲೇ ದಾಸವರೇಣ್ಯರು “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯಬಿಡು ನಾಲಿಗೆ” ಎಂದು ಹಾಡಿದ್ದಾರೆ. ನಾಲಿಗೆಯಿಂದ ಹೊರಡುವ ಮಾತು ಶರಣರ ವಚನದಂತಾಗಬೇಕೆ ವಿನಹ ಬರೀ ಮಾತಾಗಬಾರದು. ನೂರಾರು ಮಾತುಗಳು ಆಡುವುದಕ್ಕಿಂತ ಮುತ್ತಿನಂತ ಒಂದೇ ಮಾತು ಸಾಕು. “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂದು ಬಸವಣ್ಣನವರು ಸಹ ನುಡಿದಿದ್ದಾರೆ. ಮಾತಿನ ಬಗ್ಗೆ ಹಿಂದಿಯಲ್ಲಿ ಸಹ ಹೀಗೆ ಕಾಣಬಹುದು-

ಬಾತ ಮೇ ಬಾತ ಹೈ,
ಬಾತ ಮೇ ಮೌತ ಹೈ |
ಬಾತ ಮೇ ರಿಸ್ತಾ ಹೋ ಜಾತಾ ಹೈ,
ಬಾತ ಮೇ ರಿಸ್ತಾ ಬಿಗಡ ಜಾತಾ ಹೈ ||
ಅಂದರೆ ಮಾತಿನಲ್ಲಿ ಅನ್ನವಿದೆ. ಮಾತಿನಲ್ಲಿ ಪ್ರಾಣವಿದೆ. ಮಾತಿನಲ್ಲಿಯೇ ಸಂಬಂಧಗಳ ಜೊಡನೆ ಇದೆ. ಮಾತಿನಿಂದಲೇ ಸಂಬಂಧಗಳು ಒಡೆಯುತ್ತವೆ. ಆದ್ದರಿಂದ ಇನ್ನೊಂದು ಗಾದೆಯು “ಮಾತು ಬಲ್ಲವ ಮಾಣಿಕ್ಯ ತಂದ, ಮಾತು ಅರಿಯದವ ಜಗಳ ತಂದ” ಎಂದು ಮಾತಿನ ಬಗ್ಗೆ ಎಚ್ಚರಿಕೆ ಕೊಡುತ್ತದೆ.

ಒಮ್ಮೆ ಒಬ್ಬ ಹುಡುಗ ಶಾಲೆಯಿಂದ ಮನೆಗೆ ಬರುವ ದಾರಿಯಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಮಹಡಿಯ ಉಪ್ಪರಿಗೆಯಲ್ಲಿ ಕುಳಿತಿದ್ದನ್ನು ನೋಡಿ ನಕ್ಕನು. ಇದನ್ನು ಗಮನಿಸಿದ ವ್ಯಕ್ತಿ ತನ್ನ ಶ್ರೀಮಂತಿಕೆಯ ವೈಭೋಗ ಕಂಡು ಸಂತೋಷದಿಂದ ನಕ್ಕಿರಬಹುದೆಂದು ತಿಳಿದು ಅವನಿಗೆ ಬಹುಮಾನ ಕೊಡಬೇಕೆಂದು ಸೇವಕನಿಗೆ ಕರೆತರಲು ಹೇಳುವನು. ಆ ಹುಡುಗನಿಗೆ ಈ ವ್ಯಕ್ತಿಯು ನಕ್ಕಿದ್ದು ಕಾರಣವೆನೆಂದು ಕೇಳಿದಾಗ, ನೀವು ನೋಡಿದರೆ ಆನೆ ಗಾತ್ರದವರು, ಮನೆಯ ಬಾಗಿಲು ನೋಡಿದರೆ ಚಿಕ್ಕದು ನಾಳೆ ನೀಉ ಸತ್ತರೆ ನಿಮ್ಮ ಹೆಣ ಹೇಗೆ ಹೊರತರುತ್ತಾರೆಂದು ಮತ್ತೆ ನಕ್ಕನು.

ಕೋಪಗೊಂಡ ವ್ಯಕ್ತಿ ಸೇವಕರಿಗೆ ಹಗ್ಗಿನಿಂದ ಕಟ್ಟಲು ಹೇಳಿ ಅವನ ತಂದೆಗೆ ಕರೆಯಲು ಖಳಿಸುವನು. ತಂದೆ ಬಂದು ಮಗನಿಗೆ ಬೈದು ಮಗಾ ಬಾಗಿಲು ಚಿಕ್ಕದಾದರೆನಂತೆ ಹೆಣ ಹೊರ ಬರದೆ ಹೊದ್ರೆ ತುಂಡ ತುಂಡ ಮಾಡಿ ಕತ್ತರಿಸಿ ತರುವರು ಎಂದನು. ಮತ್ತೆ ಕೋಪಗೊಂಡ ವಕ್ತಿ ಇವನಿಗೂ ಹಗ್ಗಿನಿಂದ ಕಟ್ಟಲು ಹೇಳಿ, ಇವನ ತಂದೆಗೆ ಕರೆತರಲು ಸೇವಕರಿಗೆ ಹೇಳುವನು. ಹುಡುಗನ ತಾತಾ ಬಂದು ಆ ವ್ಯಕ್ತಿಗೆ ಕ್ಷಮೆಕೋರಿ ಇವರಿಬ್ಬರೂ ಅಜ್ಞಾನಿಗಳೆನ್ನುವನು. ಆದರೆ ಮಗ ಮತ್ತು ಮೊಮ್ಮಗನಿಗೆ ಬೈದು ಹಾಗೇಕೆ ವಿಚಾರ ಮಾಡ್ತಿರಾ ? ಬಾಗಿಲು ಚಿಕ್ಕದಾದರೆನಂತೆ, ಇವರು ಶ್ರೀಮಂತರಲ್ಲವೆ ? ಹೆಣ ಬರದೆ ಹೊದ್ರೆ ಏನಂತೆ ? ಇವರ ಮನೆಯಲ್ಲಿ ಸೀಮೆ ಎಣ್ಣೆ ಇಲ್ಲವೆ ? ಮನೆಗೆ ಸುರಿದು ಬೆಂಕಿ ಇಡುವರು ಎಂದನು. ಕಥೆ ಹೀಗೆ ಬೆಳೆಯುತ್ತ ಹೋಗುವುದು. ಒಟ್ಟಿನಲ್ಲಿ ನಾಲಿಗೆ ತನ್ನ ಹತೋಟಿಯಲ್ಲಿಟ್ಟುಕೊಂಡು ಸಮಯವರಿತು ಮಾತನಾಡಬೇಕು. ಇಲ್ಲವದರೆ ಸಡಿಲು ಬಿಟ್ಟರೆ ಬಂಧನಕ್ಕೂ, ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ.

ಹಮ್ಮ ತೋ ಬತ್ತಿಸ ತೂ ಅಕೇಲಿಸ ಹೈ
ಜರಾ ಬಹಾರ ನಿಕಲೇ ತೋ ಕಾಟಿ ಜಾಯ |
ರಸನ ಕಹೇ ದಸನಕೋ ತುಮ್ಮ ಕಹತೇ ಹೈ ಸಾಚ
ಲೇಕಿನ ಥೋಡಿ ಬಾತ ಕಹೇ ಬತ್ತಿಸ ಪಡೆ ಖಾಂಚ ||

ನಾವು ಮೂವತ್ತೆರಡು ಜನರಿದ್ದೇವೆ ಸ್ವಲ್ಪ ಹೊರ ಬಂದರೆ ಕತ್ತರಿಸಿ ಬಿಡುವೇವು ಎಂದು ಹಲ್ಲುಗಳು ಹೇಳಿದಾಗ ನಾಲಿಗೆ ನೀವು ಹೇಳುವುದು ಸರಿಯಿದೆ. ಆದರೆ ಒಂದು ತಪ್ಪು ಮಾತನಾಡಿದರೆ ಸಾಕು ಮೂವತ್ತೆರಡು ಜನ ನೆಲಕ್ಕೆ ಉರಳುವುದು ಸತ್ಯ ಎಂದಿತು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply