ಹೊಂಬಾಳೆ ಫಿಲಂಸ್ ನ ಹತ್ತನೇ ಸಿನಿಮಾ ಯಾವುದು…?

0

ಬೆಂಗಳೂರು –  ಹೊಂಬಾಳೆ ಫಿಲಂಸ್ ನಲ್ಲಿ  ಸಾಲು ಸಾಲು ಚಿತ್ರಗಳು ತೆರೆಗೆ ಅಪ್ಪಳಿಸುತ್ತಿವೆ. ಇತ್ತೀಚೆಗೆ ದ್ವಿತ್ವ ಚಿತ್ರ ಪೊಸ್ಟರ್ ವೊಂದನ್ನು ಬಿಡುಗಡೆ ಮಾಡಲಾಯಿತು.  ದ್ವಿತ್ವ ಚಿತ್ರವು ಹೊಂಬಾಳೆ ಪಿಲಂಸ್ ನಲ್ಲಿ ಮೂಡಿ ಬರುತ್ತಿರುವ ಒಂಬತ್ತನೇಯ ಸಿನಿಮಾ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಂಬಾಳೆ ಪಿಲಂಸ್ ನ ಹತ್ತನೇ ಚಿತ್ರವನ್ನು ಪ್ರಕಟನೆ ಮಾಡಲಿದೆ.‌

ಇದೆ ಜುಲೈ 11 ರಂದು ಹೊಂಬಾಳೆ ಪಿಲಂಸ್ ನ ಮುಂದಿನ ಚಿತ್ರದ ಪಸ್ಟ ಲುಕ್ ಹಾಗೂ ಹೆಸರು ಮುಂತಾದ ವಿವರಗಳನ್ನು ಜುಲೈ 11 ರಂದು ಬಿಡುಗಡೆ ಮಾಡಲಿದೆ ಎಂದು ಹೊಂಬಾಳೆ ಸಂಸ್ಥೆ ತಿಳಿಸಿದೆ.  ಹೊಂಬಾಳೆ ಪಿಲಂಸ್ ನ ಮುಂದಿನ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾನದಲ್ಲಿ ತುಂಬಾನೆ ಚರ್ಚೆ ಆಗುತ್ತಿದೆ. ಚಿತ್ರದ ಹೀರೋ  ಮತ್ತು ಚಿತ್ರದ ಹೆಸರು ಹಾಗೆಯೇ ಚಿತ್ರದ ಸ್ಟೋರಿ ಕುರಿತು ಎಲ್ಲರಲ್ಲೂ ಕುತುಹಲ ಮನೆ ಮಾಡಿದೆ.

ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿಅವರು ನಾಯಕರಾಗಿರಬಹುದು ಎಂದು ಅವರ ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.  ಏಕೆಂದರೆ. ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಮಾಡಿದ ಆರೋಪಕ್ಕೆ ರಕ್ಷಿತ್ ಶೆಟ್ಟಿ ಜುಲೈ 11 ರಂದು ಉತ್ತರಿಸುತ್ತೇನೆ ಎಂದು ಸವಾಲು ಹಾಕಿದ್ದರು. ಇದಕ್ಕೆ ತಕ್ಕಂತೆ ಹೊಂಬಾಳೆ ಪಿಲಂಸ್ ಅವರು ಜುಲೈ 11 ರಂದು ತಮ್ಮ ಚಿತ್ರದ ಕುರಿತು ವಿವರ ಬಿಡುಗಡೆ ಮಾಡುತ್ತಿರುವುದರಿಂದ, ಹೊಂಬಾಳೆ ಪಿಲಂಸ್ ನ ಮುಂದಿನ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಅವರು ನಾಯರಾಗಿರಬುದು ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply