ಬೆಂಗಳೂರು- ಲಾಡ್ಜ್ ಗಳಲ್ಲಿ ರೂಂ ಬಾಡಿಗೆ ಪಡೆದು ಅಲ್ಲಿದ್ದ ಟಿ.ವಿಗಳನ್ನೇ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಹೈದ್ರಾಬಾದ್ ಮೂಲದ ವಿಜಯ್ ಅಶೋಕ್ ಕಾಳೆ  ಹಿರೇಮಠ್ (32) ಬಂಧಿತ. ಆರೋಪಿ ಕಳವು ಮಾಡಿದ್ದ ಎರಡು ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 9 ಎಲ್ ಇಡಿ ಟಿವಿ ಹಾಗೂ ನಾಲ್ಕು ಮೊಬೈಲ್ ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿ ವಿಜಯ್ ಮೆಜೆಸ್ಟಿಕ್  ಸುತ್ತಮುತ್ತಲ ಲಾಡ್ಜ್ ಗಳಲ್ಲಿ ರೂಂಗಳನ್ನು ಬಾಡಿಗೆ ಪಡೆದು ಉಳಿದುಕೊಳ್ಳುತ್ತಿದ್ದ. ಬಳಿಕ ಆ ರೂಂಗಳಲ್ಲಿ ಅಳವಡಿಸಿದ್ದ ಟಿವಿಗಳನ್ನು ಕಳವು ಮಾಡಿ ಎಸ್ಕೇಪ್ ಆಗುತ್ತಿದ್ದ. ಇತ್ತೀಚೆಗೆ ವಿಷ್ಣು ಪ್ಯಾರಡೈಸ್ ಲಾಡ್ಜ್ ನಲ್ಲಿಯೂ ಟಿ.ವಿ ಕಳವು ಮಾಡಿದ್ದ. ಲಾಡ್ಜ್ ಸಿಬ್ಬಂದಿ ಸಿಸಿಟಿವಿ ಪರಿಶೀಲಿಸಿದಾಗ ವಿಜಯ್ ನ ಕಳ್ಳತನ ಸೆರೆಯಾಗಿತ್ತು.‌ ಈ ಕುರಿತು ದಾಖಲಾದ ಪ್ರಕರಣದಲ್ಲಿ ಆರೋಪಿ ವಿಜಯ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಉಳಿದ 8 ಟಿವಿಗಳ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply