ರಾಯಚೂರು – ಡಿಕೆಶಿ ,ಸಿದ್ದರಾಮಯ್ಯ ಹತಾಶೆ ಮನೋಭಾವನೆಯಿಂದ ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ, ಪ್ರತಾಪ್ ಗೌಡ ಸೇಲ್ ಆಗಿಲ್ಲ, ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಪಕ್ಷ ಬಿಟ್ಟು ಬಂದಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಮಸ್ಕಿ ಚುನಾವಣೆ ಪ್ರಚಾರದ ವೇಳೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ನಿಂದ ಕಾಂಗ್ರೆಸ್‌ಗೆ ಬಂದವರು ಹಾಗಾದ್ರೆ ನೀವು ಆಗ ಸೇಲಾಗಿದ್ರಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ಅವರಿಗೆ ಪ್ರಶ್ನೆ ಮಾಡಿದ್ದಾರೆ .

ಕಾಂಗ್ರೆಸ್‌ನವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪ್ರತಾಪ್ ಗೌಡ ಪಾಟೀಲ್ ಸೌಮ್ಯ ಸ್ವಭಾವದ ವ್ಯಕ್ತಿ. ಕ್ಷುಲ್ಲಕ ಹೇಳಿಕೆಗಳನ್ನ ಕೊಡುತ್ತಿರುವ ನಿಮ್ಮ ಆಟ ನಡೆಯಲ್ಲ. ಹಿಂದಿನ ಉಪಚುನಾವಣೆಯಲ್ಲೂ ನಿಮ್ಮ ಆಟ ನಡೆದಿಲ್ಲ ಜನ ಧೂಳಿಪಟ ಮಾಡಿದ್ದಾರೆ ಎಚ್ಚರಿಸಿದ್ರು. ಇದೇ ವೇಳೆಯಲ್ಲಿ ಬಿಜೆಪಿ ಲೂಟಿ ಹಣದಲ್ಲಿ ಚುನಾವಣೆ ಮಾಡುತ್ತಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ  ಪ್ರತಿಕ್ರಿಯೆ ನೀಡಿದ್ದು, ಲೂಟಿ ಮಾಡಿದ್ದು ಕಾಂಗ್ರೆಸ್, ದೇಶದಲ್ಲಿ ಬಹುಕೋಟಿ ಹಗರಣ ಮಾಡಿದ್ದು ಕಾಂಗ್ರೆಸ್. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಲೂಟಿ ಮಾಡಿ ಏನಾದ್ರೂ ಗೊತ್ತಿಲ್ವಾ? ಕಾಂಗ್ರೆಸ್‌ಗೆ ಮತ್ತೊಂದು ಹೆಸರು ಲೂಟಿ ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply