ಬೆಂಗಳೂರು -ಡಿ ಬಾಸ್ ಅಭಿಮಾನಿಗಳ ಬಹು ನಿರೀಕ್ಷಿತ ರಾಬರ್ಟ್ ಚಿತ್ರ ರಾಜ್ಯ ಸೇರಿದಂತೆ ಆಂದ್ರ ತೆಲಂಗಾಣದಲ್ಲಿ ಭಾರಿ ಸದ್ದು ಮಾಡಿದೆ. ಚಿತ್ರದ ಹಾಡು ಮತ್ತು ಟ್ರೈಲರ್ ಮೂಲಕ ಎಲ್ಲ ಸಿನಿ ವಿಕ್ಷಕರನ್ನು ಬೆರಗು ಮಾಡಿರುವ ರಾಬರ್ಟ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರವನ್ನು ನಡೆಸಲು ಚಿತ್ರತಂಡ ಸಿದ್ದಗೊಂಡಿದೆ. ಈಗಾಗಲೇ ಚಿತ್ರದ ಶೂಟಿಂಗ್ ಮುಗಿದಿದ್ದು. ಚಿತ್ರ ಇದೇ ಮಾರ್ಚ 11 ಕ್ಕೆ ಬಿಡುಗಡೆಯಾಗುತ್ತಿದೆ. ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳ ಫೆಬ್ರವರಿ 28 ರಂದು ನಡೆಸಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ರಾಬರ್ಟ್ ಸಿನಿಮಾ ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಬಿಡುಗಡೆಯಾಗಿತ್ತಿದ್ದು, ರಾಬರ್ಟ ಮೂಲಕ ಎರಡು ಭಾಷೆಗಳಲ್ಲಿ ದರ್ಶನ್ ಅವರು ಕಮಾಲ ಮಾಡಲಿದ್ದಾರೆ.
ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow