ಬೆಂಗಳೂರು – ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬೆಲೆ ಏರಿಕೆಯನ್ನು ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮುಖ ತೋರಿಸಲಾಗದೆ ಗಡ್ಡ ಬಿಟ್ಟಿದ್ದಾರೆ ಎಂದು ಮಾಜಿ ಸಿ ಎಮ್ ಸಿದ್ದರಾಮಯ್ಯ ವೆಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ದೇಶದ ಯುವಕರು ಮೋದಿ ಮೋದಿ ಎಂದು ಕೂಗಿ ಮೋದಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಆದ್ರೆಮೋದಿ ಈ ದೇಶದ ಯುವಜನತೆಗೆ ಮೋಸಮಾಡಿದ್ದರೆ. ಸುಳ್ಳಿಗೆ ಮತ್ತೊಂದು ಪದ ಎಂದರೆ ಅದು ಮೋದಿ ಎಂದಿದ್ದಾರೆ.
ನರೇಂದ್ರ ಮೋದಿ ಸುಳ್ಳಿಗೆ ಪರ್ಯಾಯ ಪದ. ಮೋದಿ ಮೋದಿ ಎಂದು ಕೂಗುತ್ತಾ ಅವರನ್ನು ಅಧಿಕಾರಕ್ಕೆ ತಂದ ಯುವಸಮೂಹಕ್ಕೆ ಅನ್ಯಾಯ ಮಾಡಿದ್ದಾರೆ. ಅವರ ಬಣ್ಣವನ್ನು ಬಯಲು ಮಾಡುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದು ಇನ್ನು ಕರ್ನಾಟಕದಲ್ಲಿ ಅನೈತಿಕ, ಅಸಮರ್ಥ, ಭ್ರಷ್ಟ ಸರ್ಕಾರವಿದೆ. ಏನು ಕೇಳಿದರೂ ದುಡ್ಡಿಲ್ಲ, ದುಡ್ಡಿಲ್ಲ ಎನ್ನುತ್ತಾರೆ. ದುಡ್ಡಿಲ್ಲ ಎಂದ ಮೇಲೆ ಅಧಿಕಾರದಲ್ಲಿ ಏಕೆ ಇದ್ದೀರಿ. ಕುರ್ಚಿಯಿಂದ ಇಳಿಯಿರಿ. ನಾವ್ಯಾರಾದರೂ ಬಂದು ಕೂರುತ್ತೇವೆ ಎಂದರು.