ಚೆನೈ – ರಾಕಿ ಬಾಯ್ ಯಶ್ ಸಿನಿಮಾದಲ್ಲಿ‌ ನಟಿಸಿದ್ದ ಓವಿಯಾಗೆ ಸಂಕಷ್ಟ ಎದುರಾಗಿದೆ. ಕಳೆದ ಎರಡು ದಿನಗಳ ಹಿಂದೆ ಪ್ರದಾನಿ ನರೇಂದ್ರ ಮೋದಿ ಪಕ್ಕದ ರಾಜ್ಯ ತಮಿಳುನಾಡಿಗೆ ಬಂದಿದ್ದರು.‌ ತಮಿಳು ನಾಡಿಗೆ ಬಂದ ಅವರು ರಾಜ್ಯದ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಅಲ್ಲದೇ ಹಲವಾರು ಯೋಜನೆಗಳನ್ನು ಘೋಷಣೆ ಸಹ ಮಾಡಿದ್ದಾರೆ. ಆದ್ರೆ ಬಿಜೆಪಿ ಪಾಳಯಕ್ಕೆ ಸವಾಲಾಗಿರುವು ತಮಿಳುನಾಡಿನಲ್ಲಿ ಅಲ್ಲಿನ ಸ್ಥಳೀಯರು ಗೋಬ್ಯಾಕ್ ಮೋದಿ ಸ್ಲೋಗನ್ ಹಾಕಿದ್ದರು. ಅಲ್ಲದೇ ಗೋ ಬ್ಯಾಕ್ ಮೋದಿ ಇದು ತಮಿಳುನಾಡಿನ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆದ್ರೆ ಇದೇ ವಿಷಯಕ್ಕೆ ಓವಿಯಾಗೆ ಸಂಕಷ್ಟ ಎದುರಾಗಿದೆ.

ಮೋದಿ ಅವರು ಆಗಮನಕ್ಕೆ ‌ಮುನ್ನವೇ ನಟಿ ಓವಿಯಾ ಅವರು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಗೋ ಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿದ್ದರು. ಇದಾದಬಳಿಕ ಗೋ ಬ್ಯಾಕ್ ಮೋದಿ ಟ್ರೆಂಡ್ ಆಗಿತ್ತು. ಇನ್ನು ಗೋ ಬ್ಯಾಕ್ ಮೋದಿ ಎಂದು ಟ್ವೀಟ್ ಮಾಡಿರುವ ನಟಿ ಓವಿಯಾ ವಿರುದ್ದ ಆಕ್ರೋಶ ಹೊರ ಹಾಕಿದ್ದು, ಕೇಸರಿ ಪಡೆ ಓವಿಯಾಗೆ ಕ್ಷಮೆ ಕೇಳುವಂತೆ ಒತ್ತಾಯ ಮಾಡಿದೆ.  ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ ಅಲೆಕ್ಸಿಸ್ ಸುಧಾಕರ್ ಅವರು ಎಸ್‌ಪಿ, ಸಿಬಿ-ಸಿಐಡಿಗೆ ದೂರು ನೀಡಿದ್ದಾರೆ  ಸಾರ್ವಜನಿಕವಾಗಿ ಅಗೌರವ ತೋರಿದ್ದಕ್ಕಾಗಿ ಓವಿಯಾ ವಿರುದ್ಧ ಸೆಕ್ಷನ್ 69 69 A of IT Act r/w 124 A, 153 A, ಐಪಿಸಿ 294 ಪ್ರಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಓವಿಯಾ ಅವರ ಟ್ವೀಟ್‌ನಿಂದ ಅನೇಕರು ಗುಂಪು ಸೃಷ್ಟಿ ಮಾಡಿದ್ದಾರೆ, ಸಾರ್ವಜನಿಕವಾಗಿ ಕಲಹ ಉಂಟಾಗಿದೆ. 19ಸಾವಿರಕ್ಕೂ ಅಧಿಕ ಮಂದಿ ಈ ಟ್ವೀಟ್‌ನ್ನು ರೀಟ್ವೀಟ್ ಮಾಡಿದ್ದಾರೆ. 59 ಸಾವಿರಕ್ಕೂ ಅಧಿಕ ಲೈಕ್ಸ್ ಓವಿಯಾ ಟ್ವೀಟ್‌ಗೆ ಬಂದಿದೆ ಎಂದು ಸುಧಾಕರ್ ಆರೋಪ

About Author

Priya Bot

Leave A Reply