ಮಳೆಯಲ್ಲಿ ನಿಂತು ಆಹಾರದ ಕಿಟ್ ಪಡೆದ ಕಾರ್ಮಿಕರು

0

ಬಳ್ಳಾರಿ

ಸುಮಾರು ಹತ್ತು ಸಾವಿರಕ್ಕೂ ಅಧಿಕ ಕಟ್ಟಡ ಕಾರ್ಮಿಕರಿಗೆ ಹಾಗೂ ಇತರೆ ಕಾರ್ಮಿಕರಿಗೆ ಇಂದು ಪುಡ್ ಕಿಟ್ ವಿತರಣೆ ಮಾಡಲಾಯಿತು. ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಗೋವಿಂದ ಕಲ್ಯಾಣಮಂಟಪದಲ್ಲಿ ಜಿಲ್ಲಾಡಳಿತ ಆಯೋಜಿಸಿದ ಪುಡ್ ಕಿಟ್ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಪುಡ್ ಕಿಟ್ ವಿತರಣೆ ಮಾಡಲಾಯಿತು.

ಇನ್ನು ಕಿಟ್ ಪಡೆಯಲು ಸಾವಿರಾರು ಕಾರ್ಮಿಕರು ಸಾಮಾಜಿಕ ಅಂತರ ಮರೆತು ಜಿಟಿ ಜಿಟಿ ಮಳೆಯಲ್ಲಿ ಕಾದು ನಿಂತು ಪುಡ್ ಕಿಟ್ ಪಡೆದರು. ಶಾಸಕ ಸೋಮಶೇಖರ್ ರೆಡ್ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಿದರು. ಇನ್ನೂ ಕಿಟ್ ವಿತರಣೆಯಲ್ಲಿ ಜನರ ನೂಕು ನುಗ್ಗಲು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಅಲ್ಲದೆ ಸ್ವಲ್ಪ ಸ್ವಲ್ಪ ಜನರನ್ನ ಕಲ್ಯಾಣ ಮಂಟದ ಒಳ ಬಿಟ್ಟುಕೊಂಡು ಕಿಟ್ ವಿತರಣೆ ಮಾಡಿದರು, ಆದರೆ ಮಂಟಪದಿಂದ ಹೋರಗಿದ್ದ ಜನ ಮಾತ್ರ ಜಿಟಿ ಜಿಟಿ ಮಳೆಯಲ್ಲಿ ಗಂಟೆಗಟ್ಟಲೆ ಕಾದು ನಿಂತು ಆಹಾರದ ಕಿಟ್ ಪಡೆದಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply