ಭೂಮಿ ಪೂಜೆ ಆಹ್ವಾನ ಪತ್ರಿಕೆಯಲ್ಲಿ ಯಡವಟ್ಟು

0

ಬಳ್ಳಾರಿ – ಇಂದು ಕಂಪ್ಲಿಯಲ್ಲಿ ಹಮ್ಮಿಕೊಂಡ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಏರ್ಪಡಿಸಲಾಗಿತ್ತು. ಆದರೆ, ಕಂದಾಯ ಇಲಾಖೆ ಹಾಕಿಸಿದ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಶಂಕುಸ್ಥಾಪನೆಯ ಆಹ್ವಾನ ಪತ್ರಿಕೆಯಲ್ಲಿ ಯಡವಟ್ಟು ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದು ಕಾರ್ಯಕ್ರಮ ಕೇವಲ ಕಾಂಗ್ರೆಸ್ ಗರಿಗಷ್ಟೇ ಸೀಮಿತವಾಗಿದೆನಾ ಎನ್ನುವಂತ ಮಾತುಗಳು ಪಟ್ಟಣದಲ್ಲಿ ಹರಿದಾಡಿದವು.

ಇದು ಸರ್ಕಾರದಲ್ಲ, ಕಾಂಗ್ರೆಸ್ನದ್ದು ಎಂಬುವ ಮಾತು ಕೇಳಿ ಬಂದವು. ಈ ಆಹ್ವಾನ ಪತ್ರಿಕೆಯಲ್ಲಿ ಪಟ್ಟಣದ ಪುರಸಭೆಯ ಪ್ರಥಮ ಪ್ರಜೆಯಾಗಿರುವ ಅಧ್ಯಕ್ಷರ ಹಾಗೂ ನಂ.10 ಮುದ್ದಾಪುರ ಗ್ರಾಪಂ ವ್ಯಾಪ್ತಿಯಲ್ಲಿರುವ ಮಿನಿ ವಿಧಾನಸೌಧ ಕಾಮಗಾರಿ ನಡೆಯುತ್ತದೆ. ಆದರೆ, ಗ್ರಾಪಂ ಅಧ್ಯಕ್ಷರ ಹೆಸರನ್ನು ಹಾಕದಿರುವುದು ಕಂಡು ಬಂತು.

ಕೆಲ ಚರ್ಚೆ ಹಾಗೂ ವಿರೋಧಗಳು ವ್ಯಕ್ತವಾದ ಮೇಲೆ ಎಚ್ಚೆತ್ತುಕೊಂಡ ಕಂದಾಯ ಇಲಾಖೆಯು ನಂತರ ಆಹ್ವಾನ ಪತ್ರಿಕೆಯಲ್ಲಿ ಗ್ರಾಪಂ ಹಾಗೂ ಪುರಸಭೆ ಅಧ್ಯಕ್ಷರ ಹೆಸರು ಹಾಕಿಸಿ ಕೈತೊಳೆದು ಕೊಂಡಂತಾಗಿದೆ. ಸಮಾರಂಭದ ಬ್ಯಾನರ್ನಲ್ಲಿ ಸರ್ಕಾರ ಹಾಗೂ ಕಂದಾಯ ಇಲಾಖೆ ಹೆಸರು ಇಲ್ಲದೇ, ಬರೇ ಕಂಪ್ಲಿ ಮಿನಿ ವಿಧಾನಸೌಧ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವೆಂದು ನಮೂದಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply