‘ನೀನು ಹಿಂದೂ ಅಲ್ಲ, ಹೊರಗೆ ಹೋಗು

0

ಮಂಗಳೂರು

ದೇವಸ್ಥಾನಕ್ಕೆ ಸೇರಿದ ಮೈದಾನದಲ್ಲಿ ಗೆಳೆಯರೊಂದಿಗೆ ಆಟವಾಡುತಿದ್ದ ಕ್ರೈಸ್ತ  ಧರ್ಮದ ಯುವಕನನ್ನು ಮೈದಾನದಿಂದ ಹೊರದಬ್ಬಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಜಯನಗರದ ಕೊರಂಬಡ್ಕ ದೈವಸ್ಥಾನದ ಮೈದಾನದಲ್ಲಿ ನಡೆದಿದೆ.

ಯುವಕರೊಂದಿಗೆ ಆಟವಾಡುತ್ತಿದ್ದ ಕ್ರೈಸ್ತ ಧರ್ಮದ ಯುವಕನ ಬಳಿ ಬಂದ ಪ್ರವೀಣ್ ಎಂಬಾತ ಯುವಕನನ್ನು ತರಾಟೆಗೆ ತೆಗೆದುಕೊಂಡು ‘ನೀನು ಹಿಂದೂ ಅಲ್ಲ, ಹೊರಗೆ ಹೋಗು. ಇಲ್ಲಿ ಆಡಬಾರದು’ ಎಂದಿದ್ದಾನೆ.

ಇದನ್ನು ವಿರೋಧಿಸಿದ ಆತನ ಗೆಳೆಯನಿಗೆ “ನೋಡು ಲೋಕೇಶ್, ನನಗೆ ನಿನ್ನ ಮೇಲೆ ಆಗಲೀ ಅಥವಾ ಆ ಹುಡಗನ ಮೇಲೆ ಆಗಲೀ, ಯಾರ ಮೇಲೂ ಕೋಪವಿಲ್ಲ. ಜಗಳ ಮಾಡುವುದಾದರೆ ಮಾಡುವ ನನಗೇನು ಅಭ್ಯಂತರವಿಲ್ಲ. ನಾನು ಶಾಸಕರಿಗೆ ಕರೆ ಮಾಡಿ ಮೊದಲೇ ಹೇಳಿದ್ದೇನೆ. ನನಗೆ ಯಾರ ಭಯವಿಲ್ಲ. ಇವರು ಎಸ್ಸಿ, ಎಸ್ಟಿ. ಆದರೆ ಇವರ ಜೊತೆ ಆಡುವುದರಲ್ಲಿ ನನಗೆ ಸಮಸ್ಯೆ ಇಲ್ಲ. ಆದರೆ ಹಿಂದೂ ಅಲ್ಲದ ಬೇರೆ ಧರ್ಮದವರ ಜೊತೆ ಇಲ್ಲಿ ಆಡುತ್ತಿದ್ದೀರಲ್ಲ, ಯಾಕೆ ಅವರ ಜೊತೆ ಆಡುತಿದ್ದೀರಿ..? ಎಂದು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಕ್ರೈಸ್ಥ ಯುವಕನ ಬೆಂಬಲಕ್ಕೆ ನಿಂತು ಆಟದಲ್ಲಿ ಧರ್ಮ ಯಾಕೆ ಎಂದು ಪ್ರಶ್ನಿಸಿದ ಯುವಕನಿಗೆ “ನಾವು ಮುಸ್ಲಿಮರ ಬಳಿ ಹೋಗಲ್ಲ. ಕ್ರೈಸ್ತರ ಬಳಿ ಸಹ ಹೋಗಲ್ಲ. ಚರ್ಚ್ ಎದುರು ಮೈದಾನ ಇದೆ. ಅಲ್ಲಿ ಹೋಗಿ ಆಡಲು ಸಾಧ್ಯವೇ? ನೀನು ಹಿಂದು ಅಲ್ಲ ಹೊರಗೆ ಹೋಗು , ಕೊರಗಜ್ಜ ಹಿಂದುಗಳದ್ದು, ನಿಮ್ಮದಲ್ಲ ಎಂದು ದಬಾಯಿಸಿದ್ದಾನೆ. ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಆಕ್ರೋಶ, ಚರ್ಚೆಗೆ ಕಾರಣವಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply